ಮೈಸೂರು:ಸುತ್ತೂರಿನ ಶ್ರೀ ಕ್ಷೇತ್ರಕ್ಕೆ 2009ರಲ್ಲಿ ಅರುಣ್ ಜೇಟ್ಲಿ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದುಕೊಂಡು ಹೋಗಿದ್ದರು.
ಸುತ್ತೂರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಅರುಣ್ ಜೇಟ್ಲಿ
2009ರ ಅಕ್ಟೋಬರ್ 1ರಂದು ಸುತ್ತೂರಿಗೆ ಭೇಟಿ ನೀಡಿ ಶಾಸಕರ ಚಿಂತನ ಶಿಬಿರದಲ್ಲಿ ಅರುಣ್ ಜೇಟ್ಲಿ ಭಾಗಿಯಾಗಿದ್ದರು.
2009ರ ಅಕ್ಟೋಬರ್ 1ರಂದು ಸುತ್ತೂರಿನಲ್ಲಿ ಅಂದಿನ ಶಾಸಕರಿಗೋಸ್ಕರ ಚಿಂತನ ಶಿಬಿರ ಏರ್ಪಡಿಸಲಾಗಿತ್ತು. ಅಂದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಕಪಿಲಾ ನದಿಯ ದಂಡೆ ಮೇಲಿರುವ ಶ್ರೀ ಕ್ಷೇತ್ರ ಸುತ್ತೂರಿನ ಪ್ರವಾಸಿ ಅತಿಥಿ ಗೃಹದಲ್ಲಿ ಶಾಸಕರ ಚಿಂತನ ಶಿಬಿರ ಏರ್ಪಡಿಸಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕದ ಉಸ್ತುವಾರಿ ಆಗಿದ್ದ ಅರುಣ್ ಜೇಟ್ಲಿಯವರು ಶಾಸಕರೊಂದಿಗೆ ವಿಚಾರ ಸಂಕಿರಣದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕ್ಷೇತ್ರದ ಗದ್ದುಗೆಗೆ ಭೇಟಿ ನೀಡಿ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು. ಶಿಬಿರದಲ್ಲಿ ನರೇಂದ್ರ ಮೋದಿಯವರು ಸಹ ಭಾಗವಹಿಸಿ ಶಾಸಕರಿಗೆ ಶಾಸನ ಸಭೆಯಲ್ಲಿ ನಡೆದುಕೊಳ್ಳಬೇಕಾದ ರೀತಿ-ನೀತಿಗಳು ಹಾಗೂ ಅವರ ಕರ್ತವ್ಯಗಳ ಬಗ್ಗೆ ತಿಳಿಸಿಕೊಟ್ಟಿದ್ದರು.