ಮೈಸೂರು: ಪೂಜೆ ನೆಪದಲ್ಲಿ 21 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಪೂಜಾರಿಯನ್ನು ಬಂಧಿಸಿ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೆ.ಆರ್.ನಗರ ತಾಲೂಕಿನ ಸಾತಿ ಗ್ರಾಮದ ಚೌಡೇಶ್ವರಿ ದೇವಸ್ಥಾನದ ಪೂಜಾರಿ ಮನು(28) ಬಂಧಿತ ಆರೋಪಿ. ಈತ ತನ್ನ ಮನೆಯಲ್ಲಿ ಚಿನ್ನಾಭರಣ ಇಟ್ಟು ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ನಂಬಿಸಿ ಅಕ್ಟೋಬರ್ 25ರಂದು ಸಾತಿ ಗ್ರಾಮದ ನಿವಾಸಿಗಳಾದ ಬಸಪ್ಪ, ಶಿವಲಿಂಗಪ್ಪ, ಪುಟ್ಟಪ್ಪ, ಭಾರತಿ, ಶೀಲಾ, ದೀಪಾ ಹಾಗೂ ಹುಣಸೂರಿನ ಸಂತೋಷ್ ಎಂಬುವರಿಂದ 456 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಪೂಜೆಗೆ ಇಟ್ಟಿದ್ದ. ಪೂಜೆ ಮಾಡಿದ ಒಡವೆಗಳನ್ನು ಆಯುಧ ಪೂಜೆಯ ದಿವಸದವರೆಗೆ ತೆಗೆಯಬೇಡಿ ಎಂದು ಹೇಳಿದ ಪೂಜಾರಿ ಮನು, ತನ್ನ ಮನೆಯ ಬೀರುವಿನಲ್ಲಿ ಇರಿಸಿದ್ದನಂತೆ.