ಮೈಸೂರು: ನಕಲಿ ಚಿನ್ನವನ್ನು ಗಿರವಿ ಅಂಗಡಿಯಲ್ಲಿ ಅಡವಿಟ್ಟು ವಂಚಿಸುತ್ತಿದ್ದ ಮೂವರನ್ನು, ಬೆಟ್ಟದಪುರ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಹೊಸೂರಿನ ಚಂದ್ರಶೇಖರ (40) ಹಾಸನ ಜಿಲ್ಲೆಯ ಹೊಳೆನರಸೀಪುರದ ಲೋಕೇಶ್ (55), ರತ್ನಾ (45) ಬಂಧಿತ ಆರೋಪಿಗಳಾಗಿದ್ದಾರೆ.
ನಕಲಿ ಚಿನ್ನ ಅಡವಿಟ್ಟು ವಂಚನೆ: ಮೂವರ ಬಂಧನ - ಮೈಸೂರಿನಲ್ಲಿ ನಕಲಿ ಚಿನ್ನ ಅಡವಿಟ್ಟು ವಂಚನೆ ಮಾಡಿದವರ ಬಂಧನ
ನಕಲಿ ಚಿನ್ನವನ್ನು ಗಿರವಿ ಅಂಗಡಿಯಲ್ಲಿ ಅಡವಿಟ್ಟು ವಂಚಿಸುತ್ತಿದ್ದ ಮೂವರನ್ನು, ಬೆಟ್ಟದಪುರ ಪೊಲೀಸರು ಬಂಧಿಸಿದ್ದಾರೆ.
ನಕಲಿ ಚಿನ್ನ ಅಡವಿಟ್ಟು ವಂಚನೆ ಮಾಡಿದವರ ಬಂಧನ
ಈ ಮೂವರು ಬೆಟ್ಟದಪುರದಲ್ಲಿ ಇರುವ ವಿವಿಧ ಗಿರವಿ ಅಂಗಡಿಗಳಲ್ಲಿ ನಕಲಿ ಚಿನ್ನದ ಉಂಗುರವನ್ನು ಅಡವಿಟ್ಟು, ಅಂಗಡಿ ಮಾಲೀಕರಿಗೆ ಮೋಸ ಮಾಡುತ್ತಿದ್ದರು. ಇವರನ್ನು ಬೆಟ್ಟದಪುರದ ಪೊಲೀಸರು ಬಂಧಿಸಿದ್ದು, ಇವರಿಂದ ಇಪ್ಪತ್ತೆಂಟು ಸಾವಿರಕ್ಕೂ ಅಧಿಕ ನಗದು ಹಾಗೂ ನಕಲಿ ಚಿನ್ನದ ಉಂಗುರಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಈ ಕುರಿತು ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.