ಕರ್ನಾಟಕ

karnataka

ETV Bharat / state

ಗ್ಯಾಸ್ ಕಟರ್​​​​ ಬಳಸಿ ಎಟಿಎಂ ದರೋಡೆ ಮಾಡಿದ್ದ ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ - ಮದ್ರಾಸ್ ಫ್ಯಾಕ್ಟರಿ

ವಿಚಾರಣೆ ವೇಳೆ ಎಟಿಎಂ ಕಳ್ಳತನ ಒಪ್ಪಿಕೊಂಡಿದು, ಆ ಹಣದಲ್ಲಿ 1 ಲಕ್ಷ ರೂಪಾಯಿ ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಈ ವೇಳೆ, 2,50,000 ನಗದನ್ನು ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Hdfc ATM, robbed using a gas cutter
ಗ್ಯಾಸ್ ಕಟರ್ ಬಳಸಿ ದರೋಡೆ ಮಾಡಿದ್ದ ಹೆಚ್​​​​ಡಿಎಫ್​​ಸಿ ಎಟಿಎಂ

By

Published : Oct 10, 2020, 6:04 PM IST

ಮೈಸೂರು: ಗ್ಯಾಸ್ ಕಟರ್ ಬಳಿಸಿ ಎಟಿಎಂ ದರೋಡೆ ಮಾಡಿ ತಲೆ ಮರೆಸಿಕೊಂಡಿದ್ದ ಅಂತಾರಾಜ್ಯ ಕಳ್ಳರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಬರೋಬ್ಬರಿ 2,50,000 ರೂಪಾಯಿ ಹಾಗೂ ಕೃತ್ಯಕ್ಕೆ ಬಳಸಲಾಗಿದ್ದ ಗ್ಯಾಸ್​ ಕಟರ್, ಸಿಲಿಂಡರ್, ಗ್ಯಾಸ್ ಪೈಪ್​​ ವಶಕ್ಕೆ ಪಡೆದಿದ್ದಾರೆ.

ಗ್ಯಾಸ್ ಕಟರ್ ಬಳಸಿ ದರೋಡೆ ಮಾಡಿದ್ದ ಹೆಚ್​​​​ಡಿಎಫ್​​ಸಿ ಎಟಿಎಂ

ಬಂಧಿತರಿಬ್ಬರು ಹರಿಯಾಣ ಮೂಲದ ಅನೀಸ್​ (30) ಬರ್ಖತ್​ (22) ಎಂದು ಗುರುತಿಸಲಾಗಿದೆ. ಕಳೆದ ಸೆಪ್ಟೆಂಬರ್ 17ರಂದು ವಿಜಯನಗರ ವ್ಯಾಪ್ತಿಯ ಮದ್ರಾಸ್ ಫ್ಯಾಕ್ಟರಿ ಮುಂಭಾಗದ ಹೆಚ್​​​​​ಡಿಎಫ್​​ಸಿ ಎಟಿಎಂನ ಶೆಟರ್ ಮುರಿದು ಗ್ಯಾಸ್​ ಕಟರ್​​ನಿಂದ ಎಟಿಎಂ ಕತ್ತರಿಸಿ 12,81,600 ಲಕ್ಷ ರೂಪಾಯಿ ಹೊತ್ತೊಯ್ದಿದ್ದರು.

ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಆರೋಪಿಗಳು ಹರಿಯಾಣದಲ್ಲಿರುವುದನ್ನು ಅರಿತು ಅಲ್ಲಿಗೆ ತೆರಳಿ ಬಂಧಿಸಿದ್ದಲ್ಲದೇ ಕರ್ನಾಟಕಕ್ಕೆ ಇಬ್ಬರನ್ನು ಕರೆ ತಂದಿದ್ದಾರೆ.

ವಿಚಾರಣೆ ವೇಳೆ, ಎಟಿಎಂ ಕಳ್ಳತನ ಒಪ್ಪಿಕೊಂಡಿದ್ದು ಆ ಹಣದಲ್ಲಿ 1 ಲಕ್ಷ ರೂಪಾಯಿ ತಮ್ಮ ಬ್ಯಾಂಕ್ ಖಾತೆಗೆ ಹಾಕಿರುವುದಾಗಿ ತಿಳಿಸಿದ್ದಾರೆ. ಈ ವೇಳೆ, 2,50,000 ನಗದನ್ನು ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ABOUT THE AUTHOR

...view details