ಕರ್ನಾಟಕ

karnataka

ETV Bharat / state

ಚಿನ್ನ ದರೋಡೆ, ಶೂಟೌಟ್‌ ಪ್ರಕರಣದ ದುಷ್ಕರ್ಮಿಗಳ ಬಂಧನ: ಮೈಸೂರು ಪೊಲೀಸರ ಕಾರ್ಯಾಚರಣೆ ಬಲು ರೋಚಕ! - arrest of accused who killed man in mysore

ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ನಾಲ್ಕು ದಿನಗಳ ಹಿಂದೆ ನಡೆದ ಚಿನ್ನದಂಗಡಿ ದರೋಡೆ ವೇಳೆ ಆರೋಪಿಗಳು ಅಮಾಯಕ ಚಂದ್ರು ಎಂಬ ಯುವಕನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರು ಆರೋಪಿಗಳನ್ನು ಮೈಸೂರಿನ ಪೊಲೀಸರು ಬಂಧಿಸಿದ್ದಾರೆ.

arrest of three accused in Shoot-out case of mysore
ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

By

Published : Aug 27, 2021, 9:46 AM IST

Updated : Aug 27, 2021, 4:26 PM IST

ಮೈಸೂರು: ನಗರದ ಚಿನ್ನದ ಅಂಗಡಿಯಲ್ಲಿ ನಡೆದಿದ್ದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಇಬ್ಬರು ಹಾಗೂ ಓರ್ವ ಸ್ಥಳೀಯನನ್ನು ಮಹಾರಾಷ್ಟ್ರದ ಪುಣೆ ಏರ್‌ಪೋರ್ಟ್‌​ನಲ್ಲಿ ಬಂಧಿಸಲಾಗಿದೆ.

ಆರೋಪಿ
ಆರೋಪಿಗಳು
ಆರೋಪಿ

ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ನಾಲ್ಕು ದಿನಗಳ ಹಿಂದೆ ಇವರ ಅಮಾನವೀಯ ಕೃತ್ಯಕ್ಕೆ ಅಮಾಯಕ ಚಂದ್ರು ಎಂಬ ಯುವಕ ಬಲಿಯಾಗಿದ್ದ. ಇದರ ಬೆನ್ನಲ್ಲೇ ಪೊಲೀಸರು ತಕ್ಷಣವೇ ಆರೋಪಿಗಳನ್ನು ಬಂಧಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದರು. ವಿದ್ಯಾರಣ್ಯಪುರಂ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಡಿಸಿಪಿ ಗೀತಾ ಪ್ರಸನ್ನ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದರು.

Last Updated : Aug 27, 2021, 4:26 PM IST

ABOUT THE AUTHOR

...view details