ಮೈಸೂರು: ವೃದ್ಧೆ ತನ್ನ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಗಿಡಗಳನ್ನು ನಾಶ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಟಿ.ನರಸೀಪುರ ತಾಲೂಕು ವಾಟಾಳು ಗ್ರಾಮದ ದೊಡ್ಡಪರಮೇಶಯ್ಯ (65) ಬಂಧಿತ ಆರೋಪಿ.
ಲಕ್ಷ್ಮಮ್ಮ ಎಂಬುವರಿಗೆ ಸೇರಿದ ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಬೆಳೆಯನ್ನು ದೊಡ್ಡಪರಮೇಶಯ್ಯ ನಾಶಮಾಡಿ ತಲೆಮರೆಸಿಕೊಂಡಿದ್ದ. ಹಾಳಾದ ಬೆಳೆ ಮುಂದೆ ವೃದ್ಧೆ ಗೋಳಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.