ಮೈಸೂರು:ಗೂಗಲ್ ಮೀಟ್, ಫೇಸ್ಬುಕ್ನಲ್ಲಿ ಯುವತಿಯರಿಗೆ ಗಾಳ ಹಾಕಿ, ಬೆತ್ತಲೆ ಫೋಟೋ ಕಳುಹಿಸುತ್ತಿದ್ದ ವಿಕೃತ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ನಂಜನಗೂಡು ತಾಲೂಕಿನ ಬಸವಟಿಕೆ ಗ್ರಾಮದ ಬಿ.ಜಿ.ಶಿವಪ್ರಕಾಶ್ ಬಂಧಿತ ಆರೋಪಿ. ಈತ ಯುವತಿಯರನ್ನು ಪರಿಚಯಿಸಿಕೊಂಡು ಪ್ರೀತಿ, ಪ್ರೇಮದ ನಾಟಕವಾಡಿ, ಲೈಂಗಿಕವಾಗಿ ಬಳಸಿಕೊಂಡು ಹಣ ಪೀಕುತ್ತಿದ್ದನಂತೆ.
ಮೈಸೂರು: ಯುವತಿಯರನ್ನು ಲೈಂಗಿಕವಾಗಿ ಬಳಸಿ ಹಣ ಪೀಕುತ್ತಿದ್ದ ಕಾಮುಕ ಅರೆಸ್ಟ್ - ಮೈಸೂರು
ಯುವತಿಯರಿಗೆ ಪ್ರೀತಿಯ ಬಲೆ ಬೀಸಿ, ಲೈಂಗಿಕವಾಗಿ ಬಳಸಿಕೊಂಡು ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರು: ಏಕಾಂತದ ವಿಡಿಯೋ ಮಾಡಿ ಹಣದ ಬೇಡಿಕೆ ಇಡುತ್ತಿದ್ದ ವಿಕೃತ ಕಾಮುಕ ಅರೆಸ್ಟ್
ಮೈಸೂರು ಮೂಲದ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡು 20 ಲಕ್ಷ ರೂ ವರೆಗೆ ಹಣ ಪಡೆದಿದ್ದ ಎಂದು ದೂರು ದಾಖಲಾಗಿತ್ತು. ಈ ದೂರಿನಂತೆ ತನಿಖೆ ನಡೆಸಿದ ಪೊಲೀಸರು ದುರುಳನನ್ನು ಬಂಧಿಸಿದ್ದಾರೆ. ಈತ ಹಲವು ಯುವತಿಯರನ್ನು ದುರುಪಯೋಗ ಮಾಡಿಕೊಂಡು ಏಕಾಂತದಲ್ಲಿರುವ ವಿಡಿಯೋ ಮಾಡಿಕೊಂಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಇದನ್ನೂ ಓದಿ:ಕಾರ್ತಿ ಚಿದಂಬರಂ ಆಪ್ತ ಎಸ್.ಭಾಸ್ಕರ್ ರಾಮನ್ ಬಂಧಿಸಿದ ಸಿಬಿಐ