ಕರ್ನಾಟಕ

karnataka

ETV Bharat / state

ಗುಪ್ತ ವರದಿಯನ್ನಾಧರಿಸಿ ಸೇನೆ ದಾಳಿ ಮಾಡಿದೆ: ರಕ್ಷಣಾ ಸಚಿವೆ - ರಕ್ಷಣಾ ಸಚಿವೆ

ದೇಶದ ಮೇಲೆ ಅತ್ಮಾಹುತಿ ದಾಳಿಗಳು ನಡೆಯುತ್ತವೆ ಎಂಬ ಗುಪ್ತಚರ ‌ಇಲಾಖೆಯ ವರದಿಯ ಆಧಾರದ ಮೇಲೆ‌ ಭಯೋತ್ಪಾದಕ ಕ್ಯಾಂಪ್​ಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ದಾಳಿಯನ್ನ ಸಮರ್ಥಿಸಿಕೊಂಡರು.

ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್

By

Published : Mar 6, 2019, 11:20 PM IST

ಮೈಸೂರು :ದೇಶದ ಮೇಲೆ ಆತ್ಮಾಹುತಿ ದಾಳಿಗಳಾಗುತ್ತವೆ ಎಂಬ ಗುಪ್ತಚರ ವರದಿಯನ್ನ ಆಧರಿಸಿ ನಮ್ಮ ಸೈನಿಕರು ಭಯೋತ್ಪಾದಕರ ಶಿಬಿರದ ಮೇಲೆ ದಾಳಿ ಮಾಡಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಹೇಳಿಕೆ ನೀಡಿದ್ದಾರೆ.

ಮೈಸೂರಿನ ಜೆ.ಕೆ ಗ್ರೌಂಡ್​​ನ​ಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ನರೇಂದ್ರ ಮೋದಿಯವರು ವೇಗದಿಂದ ಕೆಲಸ ಮಾಡುತ್ತಿದ್ದು, ದೇಶ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ ಎಂದರು.

ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್

ಭ್ರಷ್ಟಚಾರ ರಹಿತ ಸರ್ಕಾರವನ್ನ ಕಳೆದ 5 ವರ್ಷಗಳಿಂದಲೂ ಪ್ರಾಧಾನಿ ನರೇಂದ್ರ ಮೋದಿ ನೀಡಿದ್ದಾರೆ. ಇವರ ಅಭಿವೃದ್ಧಿಯನ್ನುಸಹಿಸದವರು ಹೇಗಾದರು ಮಾಡಿ ಈ ಬಾರಿ ಮೋದಿಯನ್ನ ಸೊಲಿಸಬೇಕೆಂಬ ಉದ್ದೇಶದಿಂದ 'ಮಹಾ ಘಟಬಂಧನ್' ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೆ ಅದು ಮಹಾ ಘಟಬಂಧನ್ ಅಲ್ಲ ನಕಾರಾತ್ಮಕ ಉದ್ದೇಶ ಹೊಂದಿರುವ ಕಲಬೆರಕೆಯ ಕೂಟ ಎಂದು ಟೀಕಿಸಿದರು. ಅಲ್ಲದೆ ಸೇನೆ ನಡೆಸಿದ ಕಾರ್ಯಚರಣೆ ಬಗ್ಗೆ ಈಗಾಗಲೇ ಸುಳ್ಳು ಸುದ್ದಿಗಳನ್ನ ಹರಡಲು ಯತ್ನಿಸುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಇನ್ನು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಹೇಳಿದ ಸಚಿವೆ, ದೇಶದ ಮೇಲೆ ಅತ್ಮಾಹುತಿ ದಾಳಿಗಳು ನಡೆಯುತ್ತವೆ ಎಂಬ ಗುಪ್ತಚರ ‌ಇಲಾಖೆಯ ವರದಿಯ ಆಧಾರದ ಮೇಲೆ‌ ಭಯೋತ್ಪಾದಕ ಕ್ಯಾಂಪ್​ಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ದಾಳಿಯನ್ನ ಸಮರ್ಥಿಸಿಕೊಂಡರು.

ABOUT THE AUTHOR

...view details