ಕರ್ನಾಟಕ

karnataka

ETV Bharat / state

ಜಂಬೂ ಸವಾರಿಯಿಂದ ಮೂರು ಆನೆಗಳು ಔಟ್​... ದಸರೆ ಪ್ರಿಯರಿಗೆ ಬೇಸರ - ದಸರಾ ಗಜಪಡೆ

ಮತ್ತಿಗೋಡು ಆನೆ ಶಿಬಿರದಿಂದ ಕರೆತರಲಾಗಿರುವ ವರಲಕ್ಷ್ಮಿ ಆನೆಯು 10ನೇ ಬಾರಿ ದಸರಾದಲ್ಲಿ ಪಾಲ್ಗೊಳ್ಳಲು ಸಜ್ಜಾಗುತ್ತಿತ್ತು. ಆದರೆ, ಗರ್ಭೀಣಿಯಾಗಿರುವ ಹಿನ್ನಲೆ ಆನೆಯನ್ನು ಕಾಡಿಗೆ ವಾಪಸ್ಸು ಕಳುಹಿಸಲು ಚಿಂತನೆ ನಡೆಸಲಾಗಿದೆ.

ದಸರಾ ಗಜಪಡೆಯ ಮೂರನೇ ಜಂಬೂಸವಾರಿಯು ಹೊರ ಉಳಿಯಲಿದೆ?

By

Published : Sep 11, 2019, 8:34 PM IST

ಮೈಸೂರು: ಈ ಬಾರಿ ಜಂಬೂಸವಾರಿ ಮೆರವಣಿಗೆ ಮುನ್ನವೇ ಮೂರು ಆನೆಗಳು ಹೊರಗುಳಿಯಲಿದ್ದು, ಸಾರ್ವಜನಿಕ ವಲಯದಲ್ಲಿ ಬೇಸರ ಮೂಡಿಸಿದೆ‌.

ದಸರಾ ಗಜಪಡೆಯ ಮೂರನೇ ಜಂಬೂಸವಾರಿಯು ಹೊರ ಉಳಿಯಲಿದೆ?

ಗಜಪಡೆ ಎರಡನೇ ಹಂತದ ತಂಡದಲ್ಲಿ ಬರಬೇಕಿದ್ದ ರೋಹಿತ ಅನೆ ಕೀಟಲೆ ಮಾಡಿದನೆಂದು ಬಂಡೀಪುರದಲ್ಲಿಯೇ ಕೈಬಿಡಲಾಯಿತು. ಇನ್ನೂ ಗಜಪಡೆಯ ಮೊದಲ ತಂಡದಲ್ಲಿ ಅದಾಗಲೇ ಆಗಮಿಸಿದ್ದ ಈಶ್ವರ ಆನೆ ಅರಮನೆಯಲ್ಲಿ ಬೀಡು ಬಿಟ್ಟಿದ್ದ. ಆದರೆ, ವಾತಾವರಣಕ್ಕೆ ಹೊಂದಿಕೊಳ್ಳದೇ ಇರುವುದರಿಂದ ಅದನ್ನೂ ಕೂಡ ದಸರಾದಿಂದ ಕೈಬಿಡಲಾಗಿದೆ.

ಸದ್ಯ ಮತ್ತಿಗೋಡು ಆನೆ ಶಿಬಿರದಿಂದ ಕರೆತರಲಾಗಿರುವ ವರಲಕ್ಷ್ಮಿ ಆನೆಯು 10ನೇ ಬಾರಿ ದಸರಾದಲ್ಲಿ ಪಾಲ್ಗೊಳ್ಳಲು ಸಜ್ಜಾಗುತ್ತಿತ್ತು. ಆದರೆ, ಗರ್ಭೀಣಿಯಾಗಿರುವುದರಿಂದ ಬೆಳಗ್ಗೆ ಹಾಗೂ ಸಂಜೆ ತಾಲೀಮಿಗೆ ಕರೆದುಕೊಂಡು ಹೋಗುವಾಗ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದು, ಇದರಿಂದ ಬೇರೆ ಆನೆಗಳಿಗೂ ತೊಂದರೆಯಾಗುತ್ತಿದೆ. ಆದ್ದರಿಂದ ಅದನ್ನು ದಸರಾ ಮೆರವಣಿಗೆಯಿಂದ ಕೈ ಬಿಟ್ಟು ಕಾಡಿಗೆ ಕಳುಹಿಸಲು ಅಧಿಕಾರಿಗಳ ವಲಯದಲ್ಲಿ ಚಿಂತನೆ ನಡೆದಿದೆ.

ABOUT THE AUTHOR

...view details