ಕರ್ನಾಟಕ

karnataka

ETV Bharat / state

ರ‍್ಯಾಪರ್​ ಚಂದನ್ ಶೆಟ್ಟಿಗೆ ಮಂಡೆಬಿಸಿ: ಮತ್ತೊಂದು ದೂರು ದಾಖಲು - Mysore latest news

ಜನಪ್ರಿಯ ಜಾನಪದ ಗೀತೆ ಕೋಲುಮಂಡೆ ಹಾಡಿಗೆ ಅಪಮಾನ ಮಾಡಿರುವ ಆರೋಪ ಎದುರಿಸುತ್ತಿರುವ ಚಂದನ್ ಶೆಟ್ಟಿ ವಿರುದ್ಧ ಇತ್ತೀಚೆಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಮತ್ತೊಂದು ದೂರು ದಾಖಲಾಗಿದೆ.

Another complaint filed against Chandan Shetty
ರ‍್ಯಾಪರ್​ ಚಂದನ್ ಶೆಟ್ಟಿ ವಿರುದ್ಧ ಮತ್ತೊಂದು ದೂರು ದಾಖಲು

By

Published : Aug 27, 2020, 8:28 PM IST

ಮೈಸೂರು: ಕೋಲುಮಂಡೆ ಹಾಡಿಗೆ ರ‍್ಯಾಪ್​ ಚಟ್​ ಕೊಡುವ ಮೂಲಕ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ರ‍್ಯಾಪರ್​ ಚಂದನ್ ಶೆಟ್ಟಿ ವಿರುದ್ಧ ಅಂತಾರಾಷ್ಟ್ರೀಯ ಕಂಸಾಳೆ ಮಹಾದೇವಯ್ಯ ಕಲಾ ಸಂಘದ ಮುಖಂಡರು ಮೈಸೂರಿನಲ್ಲಿ ಡಿಸಿಪಿಗೆ ಮತ್ತೊಂದು ದೂರು ನೀಡಿದ್ದಾರೆ.

ಜನಪ್ರಿಯ ಜಾನಪದ ಗೀತೆ ಕೋಲುಮಂಡೆ ಹಾಡಿಗೆ ಚಂದನ್ ಶೆಟ್ಟಿ ರ‍್ಯಾಪ್ ಟಚ್ ನೀಡಿ ಇತ್ತೀಚೆಗೆ ಯೂಟ್ಯೂಬ್​ನಲ್ಲಿ ವಿಡಿಯೋ ಅಪ್​​ಲೋಡ್ ಮಾಡಿದ್ದರು. ಆದರೆ, ಈ ಹಾಡಿನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಭಕ್ತಾದಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೂರಿನ ಪ್ರತಿ

ಕೋಲುಮಂಡೆ ಹಾಡಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿಯೇ ಚಂದನ್ ಶೆಟ್ಟಿ ಕ್ಷಮೆ ಕೋರಿ ಹಾಡನ್ನು ಮರು ಚಿತ್ರೀಕರಣ ಮಾಡುವುದಾಗಿ ಹೇಳಿದ್ದಾರೆ. ಆದರೆ, ಇದಕ್ಕೆ ನಮ್ಮ ಆಕ್ಷೇಪಣೆ ಇದೆ. ನಮ್ಮ ಸಂಸ್ಕೃತಿಗೆ ಅವರು ಧಕ್ಕೆಯುಂಟು ಮಾಡಿದ್ದಾರೆ. ಹಾಡನ್ನು ಮರು ಚಿತ್ರೀಕರಣ ಮಾಡಬಾರದು ಎಂದು ಆಗ್ರಹಿಸಿ ಸೆನ್ಸಾರ್​ ಮಂಡಳಿಗೂ ದೂರು ನೀಡಲಾಗುವುದು ಎಂದು ರವಿ ತಿಳಿಸಿದ್ದಾರೆ‌.

ABOUT THE AUTHOR

...view details