ಮೈಸೂರು :ಅನುಮಾನಾಸ್ಪದವಾಗಿ ಬ್ಯಾಂಕ್ ಮುಂದೆ ಇದ್ದ ಸೂಟ್ ಕೇಸ್ ಅನ್ನು ಬಾಂಬ್ ಪತ್ತೆ ದಳ ಬಂದು ಪರಿಶೀಲಿಸಿದಾಗ ಅದರಲ್ಲಿ ಬಲ್ಬ್ ಇರುವುದು ಗೊತ್ತಾಗಿದೆ.
ಸೋಮವಾರ ರಾತ್ರಿ ನಗರದ ನಾರಾಯಣ ಶಾಸ್ತ್ರಿ ರಸ್ತೆಯ ಸಿದ್ದಪ್ಪ ವೃತ್ತದ ಬಳಿ ಇರುವ ಬ್ಯಾಂಕ್ ನ ಎಟಿಎಂ ಮುಂದೆ ಅನುಮಾನಾಸ್ಪದವಾಗಿ ಬಿದ್ದಿದ್ದ ಸೂಟ್ ಕೇಸ್ ಅನ್ನು ಮಧ್ಯ ರಾತ್ರಿ ಬಾಂಬ್ ಪತ್ತೆ ದಳ ಹಾಗೂ ಶ್ವಾನ ದಳ ಬಂದು ಪರಿಶೀಲನೆ ನಡೆಸಿದಾಗ ಅನುಮಾನಾಸ್ಪದ ಸಿಕ್ಕಿದ್ದು ಬಲ್ಬ್ ಹೊರತು ಬೇರೇನೂ ಇರಲಿಲ್ಲ ಎಂದು ತಿಳಿದುಬಂದಿದೆ.