ಕರ್ನಾಟಕ

karnataka

ETV Bharat / state

ಜೆಡಿಎಸ್​ಗೆ ಯಾವ ಭಯನೂ ಇಲ್ಲ, ಸುಮಲತಾಗೆ ಭಯ ಇರಬೇಕು: ಅನಿತಾ ಕುಮಾರಸ್ವಾಮಿ ತಿರುಗೇಟು - statement

ಸುಮಲತಾ ಅಂಬರೀಶ್ ಅವರ ಹೇಳಿಕೆಗೆ ಮೈಸೂರಿನಲ್ಲಿ ಅನಿತಾ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಅನಿತಾ ಕುಮಾರಸ್ವಾಮಿ

By

Published : Mar 17, 2019, 11:15 AM IST

ಮೈಸೂರು : ಜೆಡಿಎಸ್​ಗೆ ಭಯ ಇರಬೇಕು ಎಂದ ಸುಮಲತಾ ಅಂಬರೀಶ್ ಅವರ ಹೇಳಿಕೆಗೆ ಅನಿತಾ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.


ಅನಿತಾ ಕುಮಾರಸ್ವಾಮಿ

ಮಾಜಿ ಸಚಿವ ಹಾಗೂ ಮಾಜಿ ವಿಧಾನಸಭೆ ಸಭಾಪತಿ ಕೆ.ಆರ್. ಪೇಟೆ ಕೃಷ್ಣ ಅವರನ್ನು ಭೇಟಿಯಾಗಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅನಿತಾ ಕುಮಾರಸ್ವಾಮಿ, ಮಂಡ್ಯದಲ್ಲಿ ನಮಗೆ ಯಾವ ಭಯನೂ ಇಲ್ಲ, ಸುಮಲತಾ ಅವರಿಗೆ ಭಯ ಇರಬೇಕು ಎಂದರು.




ಮಂಡ್ಯ ಜನತೆಯ ಜೊತೆಗೆ ಕುಮಾರಸ್ವಾಮಿ ಹಾಗೂ ಹೆಚ್.ಡಿ.ದೇವೇಗೌಡರಿಗೆ ಒಳ್ಳೆಯ ಭಾಂದವ್ಯವಿದೆ. ಕಷ್ಟದ ಸಮಯದಲ್ಲೂ ಎಂಟು ಕ್ಷೇತ್ರಗಳನ್ನು ಗೆಲ್ಲಿಸಿ ಕೊಟ್ಟಿದ್ದಾರೆ. ಅವರು ನಮ್ಮನ್ನ ಕೈ ಬಿಡುವುದಿಲ್ಲ. ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ 20, ಜೆಡಿಎಸ್ 8 ಸ್ಥಾನ ಹಂಚಿಕೊಂಡಿದೆ. ಇಬ್ಬರು ಕುಳಿತು ಒಟ್ಟಾಗಿ ಮಾತನಾಡಿದ್ದೇವೆ. ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ ಜನತೆ ನಮ್ಮ ಪರವಾಗಿ ಇದ್ದಾರೆ. ಈ ಚುನಾವಣೆಯಲ್ಲಿ ಅವರು ನಮ್ಮ ಪರವಾಗಿ, ನಾವು ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದರು.

ABOUT THE AUTHOR

...view details