ಮೈಸೂರು: ಇಲ್ಲಿನ ಶ್ರೀಚಾಮರಾಜೇಂದ್ರ ಮೃಗಾಲಯದ ಯೂತ್ ಕ್ಲಬ್ ಶೈಕ್ಷಣಿಕ ಕಾರ್ಯಕ್ರಮ ಪರಿಕಲ್ಪನೆಯ ರೂವಾರಿ, ಅಮೆರಿಕಾ ಮೂಲದ ಪ್ರಾಣಿ ಪ್ರಿಯೆ ಸ್ಯಾನಿವಾಕರ್ ಅವರು ಅಮೆರಿಕಾದಲ್ಲಿ ನಿಧನರಾಗಿದ್ದಾರೆ.
ಪ್ರಾಣಿಪ್ರಿಯೆ ಸ್ಯಾನಿವಾಕರ್ ನಿಧನ - ಮೃಗಾಲಯ
ಜಗತ್ತಿನ ಅನೇಕ ಶ್ರೇಷ್ಠ ಮೃಗಾಲಯಗಳ ಜೊತೆ ಮೈಸೂರು ಮೃಗಾಲಯ ಸಂಪರ್ಕ ಸಾಧಿಸಲು ಕಾರಣರಾಗಿದ್ದ ಅಮೆರಿಕಾ ಮೂಲದ ಪ್ರಾಣಿ ಪ್ರಿಯೆ ಸ್ಯಾನಿವಾಕರ್ ನಿಧನರಾಗಿದ್ದಾರೆ.

ಪ್ರಾಣಿ ಪ್ರಿಯರಾಗಿದ್ದ ಇವರು, 80ರ ದಶಕದಲ್ಲಿ ಮೈಸೂರು ಮೃಗಾಲಯದ ಸಿ.ಡಿ.ಕೃಷ್ಣೇಗೌಡ ಕ್ಯೂರೇಟರ್ ಆಗಿದ್ದ ವೇಳೆ ಸ್ಯಾನಿವಾಕರ್ ಪ್ರವಾಸಿಗರಾಗಿ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಅಪ್ಪಟ ಪ್ರಾಣಿ ಪ್ರಿಯೆಯಾದ ಅವರು ಹೆಚ್ಚು ಕಾಲ ಮೈಸೂರಿನಲ್ಲೇ ನೆಲೆಸಿ ನಿತ್ಯ ಮೃಗಾಲಯಕ್ಕೆ ಭೇಟಿ ನೀಡಿ ಪ್ರಾಣಿಗಳ ವೀಕ್ಷಣೆಯಲ್ಲಿ ಕಾಲ ಕಳೆಯುತ್ತಿದ್ದರು. ಮೈಸೂರು ಮೃಗಾಲಯ ಜಗತ್ತಿನ ಅನೇಕ ಶ್ರೇಷ್ಠ ಮೃಗಾಲಯಗಳ ಜತೆ ಸಂಪರ್ಕ ಸಾಧಿಸಲು ಸ್ಯಾನಿವಾಕರ್ ಕಾರಣರಾಗಿದ್ದರು.
ಕೊಯಮತ್ತೂರಿಗೆ ಸ್ಥಳಾಂತರಗೊಂಡ ಸ್ಯಾನಿ ಅಲ್ಲಿ ಝೂ ಔಟರೀಚ್ ಆರ್ಗನೈಸೇಷನ್ ಎನ್ನುವ ವಿಶ್ವದ ಅತ್ಯುತ್ತಮ ಸಂಶೋಧನಾ ಸಂಸ್ಥೆ ಹುಟ್ಟು ಹಾಕಿದರು. ಆ ಮೂಲಕ ಇಡೀ ದಕ್ಷಿಣ ಏಷ್ಯಾದ ಅನೇಕ ದೇಶಗಳ ಮೃಗಾಲಯಗಳ ಸುಧಾರಣಾ ಕೆಲಸ ಮಾಡಿದರು. ಜಾಗತಿಕ ಮೃಗಾಲಯಗಳ ಸುಧಾರಣೆ, ವೈಜ್ಞಾನಿಕ ಚಿಂತನೆ ಹಾಗೂ ಮೃಗಾಲಯಗಳಿಗೆ ಆಧುನಿಕ ಸ್ಪರ್ಶ ನೀಡುವಲ್ಲಿ ಸ್ಯಾನಿವಾಕರ್ ಕೊಡುಗೆ ಅಪಾರ. ವಿಶ್ವದ ಅತ್ಯಂತ ಬೃಹತ್ ಪ್ರಾಣಿಸಂಗ್ರಹಾಲಯಗಳ ಸಿಬ್ಬಂದಿ ಸಹ ಇವರ ಸಲಹೆ, ಸೂಚನೆ ಪಡೆಯುತ್ತಿದ್ದರು.