ಮೈಸೂರು: ಮೃಗಾಲಯದಲ್ಲಿ ಮತ್ತೊಂದು ನವೀನ ಮಾದರಿಯ ಒರಾಂಗೂಟಾನ್ ಪ್ರಾಣಿ ಮನೆಯ ನಿರ್ಮಾಣ ಕಾಮಗಾರಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಇದಕ್ಕೆ BNPMI 99.20 ಲಕ್ಷ ಅನುದಾನ ನೀಡಿದೆ.
ಮೈಸೂರು ಮೃಗಾಲಯದಲ್ಲಿ ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈ.ಲಿ( ಬಿಎನ್ಪಿಎಂಐ) ರವರು ಸಿಎಸ್ಆರ್ ಅನುದಾನದಲ್ಲಿ ರೂ 99.20 ಲಕ್ಷ ಕೊಡುಗೆಯನ್ನು ನೀಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಈ ಅನುದಾನದಿಂದ ಮೃಗಾಲಯದಲ್ಲಿ ನವೀನ ಮಾದರಿಯ ಒರಾಂಗೂಟಾನ್ ಪ್ರಾಣಿ ಮನೆಯನ್ನು ನಿರ್ಮಾಣ ಮಾಡಲಾಗುವುದು ಎಂದು ಮೃಗಾಲಯದ ಮೂಲಗಳು ತಿಳಿಸಿವೆ.
99.20 ಲಕ್ಷದಲ್ಲಿ ನಿರ್ಮಾಣವಾಗುತ್ತಿದೆ ಒರಾಂಗೂಟಾನ್ ಪ್ರಾಣಿ ಮನೆ ಇತ್ತೀಚಿಗೆ ಮೈಸೂರು ಮೃಗಾಲಯಕ್ಕೆ ಸಿಂಗಪುರ್ ಹಾಗೂ ಮಲೇಷಿಯಾದಿಂದ ಕ್ರಮವಾಗಿ ಮರ್ಲಿನ್-ಅಟಿನ ಮತ್ತು ಅಫಾ - ಮಿನ್ನಿ ಎಂಬ ಎರಡು ಜೊತೆ ಒರಾಂಗೂಟಾನ್ಗಳನ್ನು ತರಿಸಲಾಗಿತ್ತು. ಇವುಗಳನ್ನು ಬಿಎನ್ ಪಿಎಂಐ ನೀಡಿದ 70 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಿದ್ದ ಮನೆಯಲ್ಲಿ ಇರಿಸಲಾಗಿದೆ.
99.20 ಲಕ್ಷದಲ್ಲಿ ನಿರ್ಮಾಣವಾಗುತ್ತಿದೆ ಒರಾಂಗೂಟಾನ್ ಪ್ರಾಣಿ ಮನೆ ಈ ಒರಾಂಗೂಟಾನ್ ತಳಿಯ ಸಂತಾನಾಭಿವೃದ್ಧಿ ಮಾಡಲು ಈಗಾಗಲೇ ಇರುವ ಒರಾಂಗೂಟಾನ್ ಮನೆಯು ಸಾಲದೆ ಇರುವುದರಿಂದ ಅವುಗಳ ಕುಟುಂಬಕ್ಕೆ ಮತ್ತೊಂದು ಮನೆಯ ಅವಶ್ಯಕತೆ ಇದೆ. ಹಾಗಾಗಿ ಈ ನವೀನ ಮಾದರಿಯ ಒರಾಂಗೂಟಾನ್ ಮನೆಗೆ ಸುಮಾರು 99.20 ಲಕ್ಷ ವೆಚ್ಚವಾಗಬಹುದು ಎಂಬುದನ್ನು ಮೃಗಾಲಯದವರು ಅಂದಾಜಿಸಿದ್ದಾರೆ. ಈ ಮೊತ್ತವನ್ನ ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈ.ಲಿ ನವರು ತಮ್ಮ ಸಿಎಸ್ಆರ್ ಅನುದಾನದಲ್ಲಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಸದ್ಯದಲ್ಲೇ ಮೃಗಾಲಯದಲ್ಲಿ ನವೀನ ಮಾದರಿಯ ಒರಾಂಗೂಟಾನ್ ಪ್ರಾಣಿ ಮನೆ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಗುವುದು ಎಂದು ಮೃಗಾಲಯದ ಮೂಲಗಳು ತಿಳಿಸಿವೆ.