ಮೈಸೂರು: ಆಕ್ಸಿಜನ್ ಮಾಸ್ಕ್ ಇಲ್ಲವೆಂದು ಸೋಂಕಿತೆಯನ್ನ ದಾಖಲಿಸಿಕೊಳ್ಳದ ಆಸ್ಪತ್ರೆಯ ಧೋರಣೆಯಿಂದಾಗಿ, ಕೊರೊನಾ ಪೀಡಿತ ಮಹಿಳೆ ಮೂರು ಗಂಟೆಗಳ ಕಾಲ ಆಟೋ ರಿಕ್ಷಾದಲ್ಲಿ ನರಳಾಡಿದ ಘಟನೆ ನಗರದಲ್ಲಿ ನಡೆದಿದೆ.
ಆಕ್ಸಿಜನ್ ಮಾಸ್ಕ್ ಇಲ್ಲವೆಂದು ಸೋಂಕಿತೆಯನ್ನು ದಾಖಲಿಸಿಕೊಳ್ಳದ ಆಸ್ಪತ್ರೆ.. 3 ತಾಸು ಆಟೋದಲ್ಲೇ ಮಹಿಳೆ ನರಳಾಟ - ಮೈಸೂರಿನಲ್ಲಿ ಆಕ್ಸಿಜನ್ ಮಾಸ್ಕ್ ಇಲ್ಲ ಎಂದು ಆಸ್ಪತ್ರೆಗೆ ದಾಖಲಿಸಿಕೊಳ್ಳದ ಸಿಬ್ಬಂದಿ
ನಮ್ಮ ಆಸ್ಪತ್ರೆಯಲ್ಲಿ ಆಕ್ಸಿಜನ್ ಮಾಸ್ಕ್ ಇಲ್ಲವೆಂದು ಮೈಸೂರಿನ ಮಿಷನ್ ಆಸ್ಪತ್ರೆ ಸಿಬ್ಬಂದಿ, ಸೋಂಕಿತೆಯನ್ನ ಆಸ್ಪತ್ರೆಗೆ ದಾಖಲಿಸಿಕೊಳ್ಳುವಲ್ಲಿ ವಿಳಂಬ ಮಾಡಿದ ಆರೋಪ ಕೇಳಿಬಂದಿದೆ.
![ಆಕ್ಸಿಜನ್ ಮಾಸ್ಕ್ ಇಲ್ಲವೆಂದು ಸೋಂಕಿತೆಯನ್ನು ದಾಖಲಿಸಿಕೊಳ್ಳದ ಆಸ್ಪತ್ರೆ.. 3 ತಾಸು ಆಟೋದಲ್ಲೇ ಮಹಿಳೆ ನರಳಾಟ ಆಕ್ಸಿಜನ್ ಮಾಸ್ಕ್ ಇಲ್ಲ ಎಂದು ಆಸ್ಪತ್ರೆಗೆ ದಾಖಲಿಸಿಕೊಳ್ಳದ ಸಿಬ್ಬಂದಿ](https://etvbharatimages.akamaized.net/etvbharat/prod-images/768-512-11765243-thumbnail-3x2-abc.jpg)
ಆಕ್ಸಿಜನ್ ಮಾಸ್ಕ್ ಇಲ್ಲ ಎಂದು ಆಸ್ಪತ್ರೆಗೆ ದಾಖಲಿಸಿಕೊಳ್ಳದ ಸಿಬ್ಬಂದಿ
ಆಕ್ಸಿಜನ್ ಮಾಸ್ಕ್ ಇಲ್ಲ ಎಂದು ಆಸ್ಪತ್ರೆಗೆ ದಾಖಲಿಸಿಕೊಳ್ಳದ ಸಿಬ್ಬಂದಿ
ಹಣ ಎಷ್ಟು ಬೇಕಾದರು ಕೊಡುತ್ತೇವೆ ಮೊದಲು ದಾಖಲಿಸಿಕೊಳ್ಳಿ ಎಂದು ಸೋಂಕಿತ ಮಹಿಳೆಯ ಸಂಬಂಧಿಕರು ಬೇಡಿಕೊಂಡಿದ್ದಾರೆ. ಆದ್ರೆ ನಮ್ಮ ಆಸ್ಪತ್ರೆಯಲ್ಲಿ ಆಕ್ಸಿಜನ್ ಮಾಸ್ಕ್ ಇಲ್ಲವೆಂದು ನಗರದ ಮಿಷನ್ ಆಸ್ಪತ್ರೆ ಸಿಬ್ಬಂದಿ, ಸೋಂಕಿತೆಯನ್ನ ಆಸ್ಪತ್ರೆ ಮುಂಭಾಗ ಕಾಯಿಸಿದ್ದಾರೆ ಎನ್ನಲಾಗ್ತಿದೆ.
ಮೈಸೂರಿನ ಭೋಗಾದಿಯ ನಿವಾಸಿ ಬೆಡ್ಗಾಗಿ ಮೂರು ಆಸ್ಪತ್ರೆಗಳನ್ನು ಸುತ್ತಿ ಬಂದಿದ್ದಾರೆ. ಉಸಿರಾಟದ ಸಮಸ್ಯೆಯಿಂದ ನರಳಾಡಿದ್ದು, ಬೇರೆಡೆ ಮಾಸ್ಕ್ ತಂದು ದಾಖಲಾತಿ ಮಾಡಿಕೊಳ್ಳುವಂತೆ ಸಂಬಂಧಿಕರು ಬೇಡಿಕೊಂಡಾಗ, ಮೂರು ಗಂಟೆಗಳ ನಂತರ ಆಸ್ಪತ್ರೆ ಸಿಬ್ಬಂದಿ ಬೆಡ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
Last Updated : May 15, 2021, 11:42 AM IST