ಕರ್ನಾಟಕ

karnataka

ETV Bharat / state

ಇಂದಿನಿಂದ ಅರ್ಜುನ ಆನೆಗೆ ಮರದ ಅಂಬಾರಿ ಹೊರೆಸಿ ತಾಲೀಮು ಆರಂಭ - ಅರ್ಜುನ ಆನೆ

ಮೈಸೂರು ದಸರಾ ಹಿನ್ನೆಲೆಯಲ್ಲಿ ಚಿನ್ನದ ಅಂಬಾರಿಯನ್ನು ಜಂಬೂ ಸವಾರಿಯ ದಿನ ಹೊರುವ ಅರ್ಜುನ ಆನೆಗೆ ಇಂದಿನಿಂದ ಅರಮನೆಯ ಮುಂಭಾಗದಲ್ಲಿ 380 ಕೆಜಿ ತೂಕದ ಮರದ ಅಂಬಾರಿ, ಅದರೊಳಗೆ ಸುಮಾರು 250 ಕೆಜಿ ತೂಕದ ಮರಳು ಮೂಟೆ ಇಟ್ಟು ಇಂದಿನಿಂದ ತಾಲೀಮು ಆರಂಭಿಸಲಾಗಿದೆ.

Mysore

By

Published : Sep 19, 2019, 10:44 AM IST


ಮೈಸೂರು:ದಸರಾ ಹಿನ್ನೆಲೆಯಲ್ಲಿ ಇಂದಿನಿಂದ ಚಿನ್ನದ ಅಂಬಾರಿ ಹೊರುವ ಅರ್ಜುನ ಆನೆಗೆ ಮರದ ಅಂಬಾರಿ ಹೊರೆಸಿ ತಾಲೀಮು ನಡೆಲಾಗುತ್ತಿದೆ.

ಅರ್ಜುನ ಆನೆಗೆ ಮರದ ಅಂಬಾರಿ ಹೊರೆಸಿ ತಾಲೀಮು

ಸುಮಾರು 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಜಂಬೂ ಸವಾರಿಯ ದಿನ ಹೊರುವ ಅರ್ಜುನ ಆನೆಗೆ ಇಂದಿನಿಂದ ಅರಮನೆಯ ಮುಂಭಾಗದಲ್ಲಿ 380 ಕೆಜಿ ತೂಕದ ಮರದ ಅಂಬಾರಿ, ಅದರೊಳಗೆ ಸುಮಾರು 250 ಕೆಜಿ ತೂಕದ ಮರಳು ಮೂಟೆ ಇಟ್ಟು ಇಂದಿನಿಂದ ತಾಲೀಮು ಆರಂಭಿಸಲಾಗಿದೆ. ಅರ್ಜುನನ ಜೊತೆಗೆ ಅಭಿಮನ್ಯು, ಧನಂಜಯ ಮತ್ತು ಈಶ್ವರ ಆನೆಗಳಿಗೂ ಸಹ ತಾಲೀಮು ನಡೆಸಲಾಗುತ್ತಿದೆ. ಅರಮನೆಯಿಂದ ಬನ್ನಿ ಮಂಟಪದವರೆಗೆ ಈ ತಾಲೀಮು ಪ್ರತಿದಿನ ನಡೆಯಲಿದೆ ಎಂದು ಆನೆಯನ್ನು ನೋಡಿಕೊಳ್ಳುತ್ತಿರುವ ಪಶು ವೈದ್ಯ ನಾಗರಾಜ್ ತಿಳಿಸಿದರು.

ಇಂದು ಮರದ ಅಂಬಾರಿ ತಾಲೀಮು ಹಿನ್ನೆಲೆಯಲ್ಲಿ ಜಂಬೂ ಸವಾರಿಯ ದಿನ ಪುಷ್ಪಾರ್ಚನೆ ಮಾಡುವ ಸ್ಥಳದಲ್ಲಿ ಸೊಂಡಿಲಿನ ಮೂಲಕ ಅರ್ಜುನ ಆನೆಗೆ ನಮಸ್ಕಾರ ಮಾಡಿಸಲಾಗಿದ್ದು, ರಾಜ ಗಾಂಭೀರ್ಯದಿಂದ ಗಜಪಡೆಯು ಅರಮನೆ, ಕೋಟೆ ಆಂಜನೇಯ ದ್ವಾರದಿಂದ ಕೆ.ಆರ್. ಸರ್ಕಲ್ ಮೂಲಕ ಬನ್ನಿ ಮಂಟಪದ ಕಡೆಗೆ ಹೆಜ್ಜೆ ಹಾಕಿದೆ.

ABOUT THE AUTHOR

...view details