ಮೈಸೂರು :ಅಮೆಜಾನ್ ಆನ್ಲೈನ್ ಶಾಪಿಂಗ್ನಲ್ಲಿ ಮಕ್ಕಳಿಗಾಗಿ ಆಟಿಕೆ ಸಾಮಾನುಗಳನ್ನು ಬುಕ್ ಮಾಡಿದರೆ, ಪಾರ್ಸೆಲ್ನಲ್ಲಿ ಅಮೆಜಾನ್ ಕಳಿಸಿದ್ದು ಬರೀ ಖಾಲಿ ಬಾಕ್ಸ್. ಶಾರದಾದೇವಿ ನಗರ ನಿವಾಸಿ ಮಂಜು ಎಂಬುವರು ಕಳೆದ ಮೂರು ದಿನಗಳ ಹಿಂದೆ, ಅಮೆಜಾನ್‌ನಿಂದ ತಮ್ಮ ಅಕ್ಕನ ಮಕ್ಕಳಿಗೆ ಆಟವಾಡಲೆಂದು ಡ್ರೋಣ್ ಆಟಿಕೆ ಬುಕ್ ಮಾಡಿದ್ದರು.
ಬುಕ್ ಮಾಡಿದ್ದು ಮಕ್ಕಳ ಆಟಿಕೆ, ಅಮೆಜಾನ್ ಕಳಿಸಿದ್ದು ಖಾಲಿ ಬಾಕ್ಸ್! - amazon online shopping incident in mysuru
ಅಮೆಜಾನ್ ಆನ್ಲೈನ್ ಶಾಪಿಂಗ್ನಲ್ಲಿ ಮಕ್ಕಳ ಆಟಿಕೆ ಬುಕ್ ಮಾಡಿದ್ದಾರೆ ಆದರೆ ಬಂದಿರೋದು ಖಾಲಿ ಬಾಕ್ಸ್. ಅನುಮಾನ ಬಂದು ಬಾಕ್ಸ್ ತೆಗೆಯುವಾಗ ವಿಡಿಯೋ ಮಾಡಿದ್ದಾರೆ ಆಗ ಖಾಲಿ ಬಾಕ್ಸ್ ಬಂದಿದೆ.
ಬುಕ್ ಮಾಡಿದ್ದು ಮಕ್ಕಳ ಆಟಿಕೆ, ಅಮೇಜಾನ್ ಕಳಿಸಿದ್ದು ಖಾಲಿಬಾಕ್ಸ್ !
ಸೋಮವಾರ ಅಮೆಜಾನ್ ತಲುಪಿಸಿದ ಪಾರ್ಸೆಲ್ ತೆಗೆದು ನೋಡಿದರೆ ಖಾಲಿ ಪ್ಲಾಸ್ಟಿಕ್ ಬಾಕ್ಸ್ ಬಿಟ್ಟು ಬೇರೇನೂ ಇರಲಿಲ್ಲ. ಮಂಜು ಅವರ ಕೈಸೇರಿದ ಪಾರ್ಸೆಲ್ ಬಾಕ್ಸ್ ಲಘುವಾಗಿದ್ದರಿಂದ ಸಂಶಯಪಟ್ಟು, ಬಾಕ್ಸ್ ತೆರೆಯುವ ಮುನ್ನ ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಈ ಕುರಿತು ಅಮೆಜಾನ್ ಕಂಪನಿಯೊಂದಿಗೆ ಸಂಪರ್ಕಿಸಿದಾಗ, ತಮ್ಮ ತಪ್ಪು ಅರಿವಾಗಿ ಬುಕ್ ಮಾಡಿದ ಸಾಧನವನ್ನು ಕಳುಹಿಸುವ ಭರವಸೆ ನೀಡಿದೆ.
ಇದನ್ನೂ ಓದಿ :40ಕ್ಕೇ ರಿಟೈರಾಗಬೇಕಾ..? ಅದಕ್ಕೂ ಇದೆ ದಾರಿ..