ಕರ್ನಾಟಕ

karnataka

ETV Bharat / state

ಮೈಸೂರಲ್ಲಿ ತಂದೆಯಿಂದಲೇ ಮಗನ ಅಪಹರಣ ಆರೋಪ.. ಪೊಲೀಸ್​ ಠಾಣೆ ಮೆಟ್ಟಿಲೇರಿದ ಮೊದಲ ಪತ್ನಿ! - wife give Complaint in police station

ಮೈಸೂರಿನ ಹುಣಸೂರು ನಗರದ ಮಾರುತಿ ಬಡಾವಣೆಯಲ್ಲಿ ತಂದೆಯಿಂದಲೇ ಮಗನ ಅಪಹರಣವಾಗಿದೆ ಎನ್ನಲಾಗ್ತಿದೆ. ಮಗನ ಅಪಹರಣ ಮಾಡಲಾಗಿದೆ ಎಂದು ಆರೋಪಿಸಿ ಸುಮೇರಾ ತನ್ನ ಮಾಜಿ ಪತಿ ವಿರುದ್ಧ ದೂರು ನೀಡಿದ್ದಾರೆ.

Allegations of kidnapping of son by his father
ಜಾಫರ್ ಷರೀಫ್

By

Published : Mar 31, 2022, 7:43 PM IST

ಮೈಸೂರು: ಜಿಲ್ಲಿಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸ್ವಂತ ಮಗನನ್ನು ತಂದೆಯೇ ಅಪಹರಣ ಮಾಡಿದ್ದಾನೆ ಎಂದು ಆರೋಪಿಸಿ ಪತ್ನಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ಹುಣಸೂರಿನಲ್ಲಿ ನಡೆದಿದೆ. ಜಾಫರ್ ಷರೀಫ್ ಎಂಬ ವ್ಯಕ್ತಿ ಮಗನನ್ನು ಅಪಹರಣ ಮಾಡಿದ್ದಾನೆ ಎನ್ನಲಾಗ್ತಿದೆ. ಹುಣಸೂರು ನಗರದ ಮಾರುತಿ ಬಡಾವಣೆಯಲ್ಲಿ ಮಗು ಅಪಹರಣ ಮಾಡಿ ಪರಾರಿಯಾಗಿದ್ದಾನೆ ಎಂದು ಆತನ ಮೊದಲ ಪತ್ನಿ ಆರೋಪಿಸಿದ್ದಾಳೆ.

ಸುಮೇರಾ ಹಾಗೂ ಜಾಫರ್ ಷರೀಫ್ ದಂಪತಿಯಾಗಿದ್ದು, ನಾಲ್ಕು ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದರು. ಬಳಿಕ ಜಾಫರ್ ಷರೀಫ್ ಬೇರೆ ಮದುವೆಯಾಗಿ ಮೈಸೂರಿನಲ್ಲಿ ವಾಸವಿದ್ದ. ಆದರೆ ಹುಣಸೂರಿನಲ್ಲಿರುವ ಮೊದಲ ಪತ್ನಿಯ ಜೊತೆಯಲ್ಲಿರುವ ಪುತ್ರ ಯಾಸೀನ್​ನನ್ನು ನೋಡಲು ಬಂದು, ಚಾಕೊಲೇಟ್ ಕೊಡಿಸುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದಾನೆ. ಆದ್ರೆ ಇನ್ನೂ ಮಗನನ್ನು ಮನೆಗೆ ತಂದು ಬಿಟ್ಟಿಲ್ಲ. ಹೀಗಾಗಿ ನನ್ನ ಮಗನನ್ನು ಅಪಹರಣ ಮಾಡಲಾಗಿದೆ ಎಂದು ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಸುಮೇರಾ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ:ಗ್ರಾಮದೊಳಗೆ ಕಾವಿ, ಗ್ರಾಮದ ಹೊರಗೆ ಪ್ಯಾಂಟ್‌, ಶರ್ಟ್‌: ಜನರಿಗೆ ವಂಚಿಸುತ್ತಿದ್ದ ಇಬ್ಬರಿಗೆ ಥಳಿತ

ABOUT THE AUTHOR

...view details