ಮೈಸೂರು: ಚಿನ್ನದ ಅಂಬಾರಿ ಹೊರುವ ಅರ್ಜುನ ಸೇರಿದಂತೆ ಎಲ್ಲಾ ಆನೆಗಳು ಆರೋಗ್ಯವಾಗಿವೆ ಎಂದು ವೈದ್ಯ ನಾಗರಾಜ್ ಈಟಿವಿ ಭಾರತಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಅರ್ಜುನ ಸೇರಿದಂತೆ ಎಲ್ಲಾ ಆನೆಗಳು ಆರೋಗ್ಯವಾಗಿವೆ: ವೈದ್ಯ ನಾಗರಾಜ್ ಸ್ಪಷ್ಟನೆ - ವೈದ್ಯ ನಾಗರಾಜ್
ಅರ್ಜುನ ಆನೆ ನೇತೃತ್ವದಲ್ಲಿ ಮೊದಲ ಗಜಪಯಣ ನಾಡಹಬ್ಬ ದಸರೆಗೆ ಹೊರಟಿದ್ದು, ಅರ್ಜುನ ಸೆರೆದಂತೆ ಎಲ್ಲ ಆನೆಗಳು ಆರೋಗ್ಯವಾಗಿವೆ ಎಂದು ವೈದ್ಯ ನಾಗರಾಜ್ ತಿಳಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ದಸರಾ ಆನೆಗಳನ್ನು ನೋಡಿಕೊಳ್ಳುತ್ತಿರುವ ಡಾಕ್ಟರ್ ನಾಗರಾಜ್ ಈಟಿವಿ ಭಾರತ ಜೊತೆ ಮಾತನಾಡಿ, ಅರ್ಜುನ ಆನೆ ನೇತೃತ್ವದಲ್ಲಿ ಮೊದಲ ಗಜಪಯಣ ನಾಡಹಬ್ಬ ದಸರೆಗೆ ಹೊರಟಿವೆ. ಅರ್ಜುನ, ಅಭಿಮನ್ಯು, ಧನಂಜಯ, ಈಶ್ವರ ಹಾಗೂ ಹೆಣ್ಣು ಆನೆಗಳಾದ ವರಲಕ್ಷ್ಮಿ, ವಿಜಯ ಆನೆಗಳು ಒಂದೊಂದು ಲಾರಿ ಮೂಲಕ ಅರಣ್ಯ ಭವನಕ್ಕೆ ಬಂದು ನಂತರ 26ರಂದು ಗಣ್ಯರ ಪೂಜೆಯೊಂದಿಗೆ ಗಜಪಡೆ ಅರಮನೆ ಪ್ರವೇಶ ಮಾಡಲಿದೆ ಎಂದರು. ಈ ಬಾರಿ ಮೊದಲ ತಂಡಲ್ಲಿ ಹೊಸದಾಗಿ ಈಶ್ವರ ಆನೆ ಬಂದಿದ್ದು, ಸ್ವಲ್ಪ ಗಾಬರಿಯಾದಂತೆ ಕಂಡು ಬಂದ್ರೂ ಆರೋಗ್ಯವಾಗಿದ್ದಾನೆ.
ಅರ್ಜುನ ಮೊದಲಿನ ಹಾಗೆ ಆರೋಗ್ಯವಾಗಿದ್ದಾನೆ. ಮೈಸೂರಿಗೆ ಹೋದ ನಂತರ ವಿಶೇಷ ಆಹಾರ ನೀಡಿ ಆತನ ತೂಕವನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದ ವೈದ್ಯರು ಎರಡನೇ ಹಂತದ ಆನೆಗಳು ಯಾವಾಗ ಬರುತ್ತವೆ ಎಂಬುದು ಇನ್ನೂ ದಿನಾಂಕ ನಿಗದಿಯಾಗಿಲ್ಲ. ಈ ಬಾರಿ ದಸರದಲ್ಲಿ14 ಆನೆಗಳು ಭಾಗವಹಿಸಲಿದ್ದು, ಅದರಲ್ಲಿ ಎರಡು ಹೊಸ ಆನೆ ಸೇರಿವೆ ಎಂದು ಡಾಕ್ಟರ್ ನಾಗರಾಜ್ ಸ್ಪಷ್ಟಪಡಿಸಿದರು.