ಕರ್ನಾಟಕ

karnataka

ETV Bharat / state

ಹೊಸ ಸಂಚಾರ ನಿಯಮ ಉಲ್ಲಂಘನೆ: ಒಂದೇ ದಿನಲ್ಲಿ 162 ಕೇಸ್​, ಲಕ್ಷಾಂತರ ರೂ ಸಂಗ್ರಹ! - ಮೈಸೂರು ನಗರ ಸಂಚಾರ ಪೊಲೀಸ

ಕೇಂದ್ರ ಸರ್ಕಾರದ ಹೊಸ ಸಂಚಾರ ನಿಯಮದಿಂದಾಗಿ ರಾಜ್ಯ ಸವಾರರು ಕಂಗಾಲಾಗಿದ್ದು, ದುಪ್ಪಟ್ಟಾದ ದಂಡದಿಂದಾಗಿ ವಾಹನ ಸವಾರರು ಹಿಡಿಶಾಪ ಹಾಕುತ್ತಾರೆ.

ಟ್ರಾಫಿಕ್ ಪೊಲೀಸ್​

By

Published : Sep 8, 2019, 6:13 AM IST

ಮೈಸೂರು:ಸಂಚಾರ ನಿಯಮ ಉಲ್ಲಂಘನೆ ಸಂಬಂಧ ದಂಡದ ಹಣ ದುಪ್ಪಟ್ಟಾದ ಬೆನ್ನಲ್ಲೇ ಕಾರ್ಯಾಚರಣೆ ಆರಂಭಿಸಿರುವ ಮೈಸೂರು ನಗರ ಸಂಚಾರ ಪೊಲೀಸರು ಒಂದೇ ದಿನ 162 ಪ್ರಕರಣ ದಾಖಲಿಸಿ ಬರೋಬ್ಬರಿ ₹ 1,78,500 ದಂಡ ಸಂಗ್ರಹಿಸಿದ್ದಾರೆ.

ಟ್ರಾಫಿಕ್ ಪೊಲೀಸ್​

ರಾಜ್ಯ ಸರ್ಕಾರದ ಆದೇಶದ ಮೇರೆಗೆ ದಂಡದ ಮೊತ್ತದಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿದ್ದು, ಶನಿವಾರದಿಂದಲೇ ಜಾರಿಯಾಗಲಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತರು ಪ್ರಕಟಿಸಿದ್ದರು. ಈ ಹಿನ್ನಲೆಯಲ್ಲಿ ಶನಿವಾರ ಬೆಳಗ್ಗೆ ಎಂದಿನಂತೆ ನಗರದ ಪ್ರಮುಖ ವೃತ್ತಗಳು ಮತ್ತು ರಸ್ತೆಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ತಪಾಸಣಾ ಕಾರ್ಯ ನಡೆಸಿದರು.

ಹೆಲ್ಮೆಟ್ ಧರಿಸದ, ಸೀಲ್ಟ್ ಬೆಲ್ಟ್ ಹಾಕದೇ ಇರುವುದು, ತ್ರಿಬಲ್ ರೈಡಿಂಗ್, ವೇಗ ಮಿತಿ ಉಲ್ಲಂಘನೆ ಹೀಗೆ ಹಲವು ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸವಾರರಿಗೆ ₹ 100 ದಂಡ ವಿಧಿಸುತ್ತಿದ್ದ ಸಂಚಾರ ಪೊಲೀಸರು, ಇದೀಗ ಸಾವಿರ ರೂಪಾಯಿ ದಂಡ ಹಾಕುತ್ತಿದ್ದಾರೆ.

ಮೈಸೂರು ನಗರದ ದೇವರಾಜ, ಕೃಷ್ಣರಾಜ, ವಿವಿ ಪುರಂ, ನರಸಿಂಹರಾಜ ಮತ್ತು ಸಿದ್ಧಾರ್ಥ ನಗರ ಸಂಚಾರ ಠಾಣೆ ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯ ಪ್ರಮುಖ ರಸ್ತೆಗಳು ಮತ್ತು ವೃತ್ತಗಳಲ್ಲಿ ಶನಿವಾರ ಬೆಳಗ್ಗೆ ಮತ್ತು ಸಂಜೆ ಕಾರ್ಯಾಚರಣೆ ನಡೆಸಿ, ದುಪ್ಪಟ್ಟು ದಂಡ ವಸೂಲಿ ಮಾಡಿದರು.

ಸವಾರರಿಂದ ಆಕ್ಷೇಪ:ಪೊಲೀಸರ ಸಂಚಾರ ತಪಾಸಣೆ ವೇಳೆ ಸಂಚಾರ ನಿಯಮ ಉಲ್ಲಂಘಿಸಿದ ಸವಾರರಿಂದ ದಂಡ ವಸೂಲಿ ಮಾಡುತ್ತಿರುವುದಕ್ಕೆ ಕೆಲ ವಾಹನ ಸವಾರರು ಆಕ್ಷೇಪ ವ್ಯಕ್ತಪಡಿಸಿದರು. ಏಕಾಏಕಿ ದುಬಾರಿ ದಂಡ ವಸೂಲಿ ಮಾಡಿದರೆ ಹೇಗೆ, ನಮಗೆ ಹೆಚ್ಚುವರಿ ದಂಡ ವಿಧಿಸುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಈ ಬಾರಿ ಬಿಡಿ ಮುಂದೆ ಸಂಚಾರ ನಿಯಮ ಉಲ್ಲಂಘನೆ ಮಾಡದೇ ವಾಹನ ಚಾಲನೆ ಮಾಡುವುದಾಗಿ ಕೇಳುತ್ತಿರುವುದು ಸಾಮಾನ್ಯವಾಗಿತ್ತು. ಅಲ್ಲದೇ ಕೆಲ ಸವಾರರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.

ABOUT THE AUTHOR

...view details