ಕರ್ನಾಟಕ

karnataka

ETV Bharat / state

ಮೈಸೂರು: ವಾಸಸ್ಥಳದ ಹಕ್ಕುಪತ್ರಕ್ಕಾಗಿ ಅಲೆಮಾರಿ ಜನಾಂಗದವರ ಪ್ರತಿಭಟನೆ - ಈಟಿವಿ ಭಾರತ ಕನ್ನಡ

ಏಕಲವ್ಯ ನಗರದಲ್ಲಿ ಕಳೆದ 20 ವರ್ಷಗಳಿಂದ ವಾಸ ಮಾಡುತ್ತಿರುವ ಅಲೆಮಾರಿ ಜನಾಂಗದವರು, ತಮ್ಮ ವಾಸಸ್ಥಳದ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದಾರೆ.

KN_MYS_04_2
ಅಲೆಮಾರಿ ಜನಾಂಗದವರ ಪ್ರತಿಭಟನೆ

By

Published : Oct 28, 2022, 7:04 PM IST

ಮೈಸೂರು: ತಮ್ಮ ಮನೆಯ ಹಕ್ಕುಪತ್ರಕ್ಕಾಗಿ 44 ದಿನಗಳಿಂದ ಸಂಸಾರಸಮೇತವಾಗಿ ಜಿಲ್ಲಾಧಿಕಾರಿ ಕಚೇರಿಯ ಬಳಿ ಏಕಲವ್ಯ ನಗರದ ಅಲೆಮಾರಿ ಜನಾಂಗದವರು ಪ್ರತಿಭಟನೆ ನಡೆಸುತ್ತಿದ್ದಾರೆ.

ಡಿಸಿ ಕಚೇರಿ ಮುಂದೆ ಅಲೆಮಾರಿ ಜನಾಂಗದವರ ಪ್ರತಿಭಟನೆ

ನಗರದ ಹೊರವಲಯದಲ್ಲಿರುವ ಏಕಲವ್ಯ ನಗರದ 250 ಅಲೆಮಾರಿ ಕುಟುಂಬದವರು ಕಳೆದ 20 ವರ್ಷಗಳಿಂದ ಸರ್ಕಾರಿ ಸ್ಥಳದ ಸರ್ವೇ ನಂಬರ್ 37 ರಲ್ಲಿ ವಾಸ ಮಾಡುತ್ತಿದ್ದಾರೆ. ನಮ್ಮ ಮನೆಗಳಿಗೆ ಸರ್ಕಾರ ಮೂಲಭೂತ ಸೌಲಭ್ಯಗಳನ್ನು ನೀಡಿದ್ದರೂ ಈ ಜಾಗವನ್ನು ಕಬಳಿಸಲು ಭೂಗಳ್ಳರು ದಿನನಿತ್ಯ ಸಂಚು ಮಾಡುತ್ತಿದ್ದಾರೆ. ಹೀಗಾಗಿ, ವಾಸಸ್ಥಳದ ಹಕ್ಕು ಪತ್ರ ನೀಡಬೇಕು ಎಂದು ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿಯ ಬಳಿ ಪ್ರತಿಭಟನೆ ನಡೆಸಿದರು.

ಹಕ್ಕುಪತ್ರ ಪಡೆಯಲು 40 ವರ್ಷವಾದರೂ ಇಲ್ಲೇ ಪ್ರತಿಭಟನೆ ನಡೆಸುತ್ತೇವೆ. ಅಲ್ಲಿಯವರೆಗೆ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ:ರಾಷ್ಟ್ರೀಯ ಹೆದ್ದಾರಿ ಬಂದ್, ಉರುಳು ಸೇವೆ ಮಾಡಿ ಕಬ್ಬು ಬೆಳೆಗಾರರ ಪ್ರತಿಭಟನೆ

ABOUT THE AUTHOR

...view details