ಕರ್ನಾಟಕ

karnataka

ETV Bharat / state

ಯೋಧನಿಂದ ಆಲ್ಬಂ ಸಾಂಗ್... ಲೋಕಾರ್ಪಣೆ ಮಾಡಲಿರುವ ಪವರ್​​ ಸ್ಟಾರ್​​ - kannada news

ಗಡಿಯಲ್ಲಿ ಸೈನಿಕರ ದಿನಚರಿ ಕುರಿತು ಸ್ವತಃ ಸೈನಿಕನೇ ಹಾಡೊಂದನ್ನ ರಚಿಸಿದ್ದು, ಪವರ್ ಸ್ಟಾರ್ ಪುನೀತ್​ ರಾಜಕುಮಾರ್​​ ಅವರಿಂದ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ.

ಜೈ ಜವಾನ್ ಜೈ ಕಿಸಾನ್ ವಿಡಿಯೋ ಆಲ್ಬಂ ಸಾಂಗ್

By

Published : Apr 23, 2019, 6:15 PM IST

ಮೈಸೂರು:ಗಡಿಯಲ್ಲಿ‌ ಯೋಧರ ಜೀವನದ ದಿನಚರಿ ಹೇಗಿರುತ್ತದೆ ಎಂಬ ಕುರಿತು ಯೋಧನೊಬ್ಬ ಜೈ ಜವಾನ್ ಜೈ ಕಿಸಾನ್ ವಿಡಿಯೋ ಆಲ್ಬಂ ರಚಿಸಿದ್ದು‌, ರಾಜಕುಮಾರ್​ ಹುಟ್ಟುಹಬ್ಬದಂದು ಬಿಡುಗಡೆಗೆ ಸಿದ್ಧವಾಗಿದೆ. ಈ ಆಲ್ಬಂ ಕುರಿತು ವಿಶೇಷ ಸಂದರ್ಶನ ಇಲ್ಲಿದೆ.

ಜೈ ಜವಾನ್ ಜೈ ಕಿಸಾನ್ ವಿಡಿಯೋ ಆಲ್ಬಂ ಸಾಂಗ್

ಮೈಸೂರು ನಗರದ ಮೇಟಗಳ್ಳಿ ನಿವಾಸಿಯಾಗಿರುವ ಅಭಿಜಿತ್ ಸೈನಿಕನಾಗಿದ್ದು, ಕಾಶ್ಮೀರದ ಗಡಿ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಜೆಗೆ ಊರಿಗೆ ಬಂದ ಸಂದರ್ಭದಲ್ಲಿ ತನ್ನ ಸ್ನೇಹಿತರೊಂದಿಗೆ ಏನಾದರು ಮಾಡಬೇಕು ಎಂಬ ಕುರಿತು ಚರ್ಚಿಸುವ ಸಂದರ್ಭದಲ್ಲಿ ಇತ್ತೀಚೆಗೆ ಪುಲ್ವಾಮಾ ದಾಳಿಯಲ್ಲಿ ಯೋಧರು ಹುತಾತ್ಮರಾಗಿದ್ದು ಈ ಕುರಿತು ಜನಸಾಮಾನ್ಯರಲ್ಲಿ ಯೋಧರ ಕುರಿತು ಕುತೂಹಲ ಹೆಚ್ಚಾಗಿದೆ.

ಇದರಿಂದ ಜನಸಾಮಾನ್ಯರಿಗೆ ಯೋಧರ ದಿನಚರಿ ಹೇಗಿರುತ್ತದೆ ಮತ್ತು ಗಡಿಯಲ್ಲಿ ದಿನದ 24 ಗಂಟೆಯು ಯಾವ ರೀತಿ ಕೆಲಸ ಮಾಡುತ್ತಾರೆ. ಶತ್ರುಗಳನ್ನು ಯಾವ ರೀತಿ ಕಾದು ಹಿಮ್ಮೆಟ್ಟಿಸುತ್ತಾರೆ ಎಂಬ ಕುರಿತು 3 ನಿಮಿಷ 29 ಸೆಕೆಂಡ್‌ಗಳ ವಿಡಿಯೋ ಆಲ್ಬಂ ಅನ್ನು ಸ್ವತಃ ಅಭಿಜಿತ್ ಸ್ನೇಹಿತರ ಸಹಾಯದಿಂದ ಮೈಸೂರು ನಗರ ಹಾಗೂ ಸುತ್ತ ಮುತ್ತ ಚಿತ್ರೀಕರಣ ಮಾಡಿ ಏಪ್ರಿಲ್‌ 24 ರಂದು ಡಾ. ರಾಜಕುಮಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪುನೀತ್ ರಾಜಕುಮಾರ್​ ಅವರಿಂದ ಆಲ್ಬಂ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಈಟಿವಿ ಭಾರತ್ ಜೊತೆ ಯೋಧ ಅಭಿಜಿತ್ ತನ್ನ ಅಲ್ಭಂ ಬಗ್ಗೆ‌‌ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ABOUT THE AUTHOR

...view details