ಮೈಸೂರು:ಅಕ್ಷಯ ತೃತೀಯ ಹಿನ್ನೆಲೆ ಮೈಸೂರಿನಲ್ಲಿ ಜನರು ಚಿನ್ನ ಖರೀದಿಗೆ ಎಂದು ಚಿನ್ನದ ಅಂಗಡಿಗಳಿಗೆ ಬರುತ್ತಿದ್ದಾರೆ. ಚಿನ್ನದಂಗಡಿಗಳು ವಿವಿಧ ರೀತಿಯ ಅಫರ್ಗಳನ್ನು ನೀಡಿ, ಗ್ರಾಹಕರನ್ನು ಆಕರ್ಷಿಸುತ್ತಿವೆ. ಅಕ್ಷಯ ತೃತೀಯ ದಿನ ಚಿನ್ನ ಖರೀದಿ ಮಾಡಿದ್ರೆ, ಸಂಪತ್ತು ವೃದ್ಧಿ ಆಗುತ್ತದೆ ಎಂಬ ನಂಬಿಕೆ ಜನರಲ್ಲಿದೆ.
ಅಕ್ಷಯ ತೃತೀಯ ಹಿನ್ನೆಲೆ: ಮೈಸೂರಿನಲ್ಲಿ ಚಿನ್ನ ಖರೀದಿ ಜೋರು - ಮೇ.3 ರಂದು ರಾಜ್ಯದಾದ್ಯಂತ ಅಕ್ಷಯ ತೃತೀಯ
ಅಕ್ಷಯ ತೃತೀಯ ದಿನ ಚಿನ್ನ ಖರೀದಿ ಮಾಡಿದ್ರೆ, ಸಂಪತ್ತು ವೃದ್ಧಿ ಆಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಹಾಗಾಗಿ ಗೋಲ್ಡ್ ಖರೀದಿ ಮಾಡಲು ಹೆಚ್ಚು ಸಂಖ್ಯೆಯಲ್ಲಿ ಗ್ರಾಹಕರು ಚಿನ್ನದ ಅಂಗಡಿಗಳಿಗೆ ಲಗ್ಗೆ ಇಡುತ್ತಿದ್ದಾರೆ. ಇತ್ತ ಚಿನ್ನದಂಗಡಿಗಳು ಸಹ ವಿವಿಧ ರೀತಿಯ ಆಫರ್ಗಳನ್ನು ನೀಡುತ್ತಿವೆ.
ಅಕ್ಷಯ ತೃತೀಯ
ಗ್ರಾಹಕರನ್ನು ಆಕರ್ಷಣೆ ಮಾಡಲು ವಿವಿಧ ರೀತಿಯ ರಿಯಾಯಿತಿಗಳನ್ನ ಚಿನ್ನದ ಅಂಗಡಿಗಳು ನೀಡುತ್ತಿವೆ. ಅದರಲ್ಲೂ ಚಿನ್ನ ಖರೀದಿಯ ಮೇಲೆ ಬೆಳ್ಳಿ ಉಚಿತ, ಮೇಕಿಂಗ್ ಚಾರ್ಜ್ ಕಡಿಮೆ, ಗ್ರಾಂ ಮೇಲೆ ವಿವಿಧ ರೀತಿಯ ಡಿಸ್ಕೌಂಟ್ ಅನ್ನು ನೀಡಲಾಗುತ್ತಿದೆ. ಇನ್ನೂ ಚಿನ್ನ ಖರೀದಿಯ ಮೇಲೆ ಧರ್ಮ ದಂಗಲ್ ಸಹ ಪ್ರಭಾವ ಬೀರಿದೆ ಎನ್ನಬಹುದು.
ಇದನ್ನೂ ಓದಿ:ಕನ್ನಡ ಭಾಷೆ, ನೆಲಕ್ಕೆ ಅಪಚಾರ ಎಸಗುವ ಯಾವುದೇ ಕೆಲಸದಲ್ಲಿ ನಾನು ಭಾಗಿಯಾಗುವುದಿಲ್ಲ: ನಟ ಸುಚೇಂದ್ರ ಪ್ರಸಾದ್