ಮೈಸೂರು:ರಸ್ತೆ ಅಪಘಾತದಲ್ಲಿ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು, ಅಸ್ಪತ್ರೆ ಸೇರಿದ 17 ವರ್ಷದ ಆಕಾಶ್ಗೆ ಮೆದುಳು ನಿಷ್ಕ್ರಿಯವಾಗಿದೆ. ಈ ಸಂದರ್ಭದಲ್ಲಿ ಕುಟುಂಬದವರ ಇಚ್ಚೇಯ ಮೇರೆಗೆ ಅಂಗಾಂಗಗಳನ್ನ ದಾನ ಮಾಡಲಾಗಿದ್ದು, ಈ ಮೂಲಕ 17 ವರ್ಷದ ಆಕಾಶ್ ಅತ್ಯಂತ ಕಿರಿಯ ವಯಸ್ಸಿನ ಅಂಗಾಂಗ ದಾನಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಈತನ ಅಂಗಾಂಗ ದಾನ ಮಾಡಲಾಯಿತು.
ಮೈಸೂರು ನಗರದ ರಾಜ್ ಕುಮಾರ್ ರಸ್ತೆಯ ಬಳಿ ಆಕಾಶ್(17) ಎಂಬ ಬಾಲಕನಿಗೆ ಅಪಘಾತವಾಗಿತ್ತು. ತಕ್ಷಣ ಆತನನ್ನು ಹತ್ತಿರದ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ, ತಲೆಗೆ ಗಂಭೀರ ಗಾಯವುಂಟಾಗಿದ್ದ ಕಾರಣ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಅಪೋಲೋ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಆತನನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ, ಚಿಕಿತ್ಸೆ ನೀಡಲಾಯಿತು.
ಚಿಕಿತ್ಸೆ ಫಲಿಸದೇ ಪರಿಣಾಮ ಕೊನೆಯುಸಿರೆಳೆದ ಆಕಾಶ್ :ಮೈಸೂರಿನ ಅಪೋಲೋ ಬಿಜಿಎಸ್ ಅಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದ ಆಕಾಶ್ನನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು. ತದ ನಂತರ ಆಕಾಶ್ ಗೆ ಮೆದುಳು ನಿಷ್ಕ್ರಿಯವಾಗಿದೆ ಎಂದು ಮಾನವ ಅಂಗಾಂಗ ಕಸಿ ಕಾಯಿದೆಯ ಶಿಷ್ಟಾಚಾರದ ಅನುಸಾರ ತಜ್ಞ ವೈದ್ಯರ ತಂಡ ಪರಿಶೀಲಿಸಿ ಖಾತ್ರಿ ಪಡಿಸಿದರು. ವೈದ್ಯರು ಮತ್ತಷ್ಟು ಪರೀಕ್ಷೆಗಳನ್ನು ನಡೆಸಿದ ಬಳಿಕವೂ ಆಕಾಶ್ ಬದುಕಲಿಲ್ಲ. ಆಕಾಶ್ ಮೃತಪಟ್ಟಿದ್ದನ್ನು ವೈದ್ಯರು ಖಾತ್ರಿ ಪಡಿಸಿದರು.
ಪೋಷಕರ ಅನುಮತಿ ಬಳಿಕ ಅಂಗಾಂಗ ಕಸಿ:ಆಕಾಶ್ ಮರಣದ ನಂತರ ಆತನ ಪೋಷಕರಿಗೆ ತಿಳಿಸಲಾಯಿತು. ಅವರಿಗೆ ಅಂಗಾಂಗ ದಾನದ ಬಗ್ಗೆ ಕೌನ್ಸೆಲಿಂಗ್ ನಡೆಸಲಾಯಿತು. ಆಕಾಶ್ನ ಪೋಷಕರು ಅಂಗಾಂಗ ದಾನಕ್ಕೆ ಸಮ್ಮತಿಸಿದರು. ನಂತರ ನಿಗದಿತ ಶಿಷ್ಟಾಚಾರದಂತೆ ಆಕಾಶ್ ನ ದೇಹದಿಂದ ಯಕೃತ್ತು. ಎರಡು ಮೂತ್ರ ಪಿಂಡಗಳು, ಹೃದಯ ಕವಾಟುಗಳು ಮತ್ತು ಕಾರ್ನಿಯಾವನ್ನ ಕಸಿ ಮಾಡಲಾಗಿದೆ.
ಕಿಡ್ನಿ ದಾನ ಮಾಡಿ ಮೊಮ್ಮಗನಿಗೆ ಬದುಕು ಕೊಟ್ಟ ಅಜ್ಜಿ(ವಿಜಯಪುರ): ತಾನು ಬಿದ್ದು ಹೋಗುವ ಮರ. ನನ್ನ ಮೊಮ್ಮಗ ಇನ್ನೂ ಬಾಳಿ ಬದುಕಬೇಕು ಎಂದು 73 ವರ್ಷದ ಅಜ್ಜಿಯೊಬ್ಬರು ತಮ್ಮ 21 ವರ್ಷದ ಮೊಮ್ಮಗನಿಗೆ ಕಿಡ್ನಿ ದಾನ ಮಾಡಿದ ಅಪರೂಪ ಘಟನೆಗೆ ನಗರದ ಯಶೋಧಾ ಆಸ್ಪತ್ರೆ ಸಾಕ್ಷಿಯಾಗಿದೆ. ವಿಜಯಪುರ ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಮೊದಲ ಯಶಸ್ವಿ ಮೂತ್ರಪಿಂಡ(ಕಿಡ್ನಿ) ಕಸಿ ಇದಾಗಿದೆ. ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಅಂಗಾಂಗ ಕಸಿ ಅಗತ್ಯವಿರುವ ಲಕ್ಷಾಂತರ ಜನರಿಗೆ ಭರವಸೆ ಮೂಡಿಸಿದೆ.