ಕರ್ನಾಟಕ

karnataka

ETV Bharat / state

ಮೈಸೂರು ದಸರಾ ಮಹೋತ್ಸವದಲ್ಲಿ ಅ.2ರಿಂದ ಏರ್ ಶೋ... - ಜಿಲ್ಲಾಧಿಕಾರಿ ಅಭಿರಾಮ್‌ ಜಿ.‌ಶಂಕರ್

ದಸರಾ ಮಹೋತ್ಸವದ ಹಿನ್ನೆಲೆ ಮೈಸೂರು ನಗರದ ಬನ್ನಿಮಂಟಪ‌ ಮೈದಾನದಲ್ಲಿ ಅಕ್ಟೋಬರ್ 2 ರಂದು ಏರ್ ಶೋ ಆಯೋಜಿಸಲಾಗಿದೆ.

ದಸರಾ ಮಹೋತ್ಸವ ಹಿನ್ನೆಲೆ ಏರ್ ಶೋ ಆಯೋಜನೆ...!

By

Published : Sep 30, 2019, 9:19 PM IST

ಮೈಸೂರು: ದಸರಾ ಮಹೋತ್ಸವದ ಹಿನ್ನೆಲೆ ಇಂಡಿಯನ್ ಏರ್​ಫೋರ್ಸ್ ಸಹಯೋಗದಲ್ಲಿ ಏರ್ ಶೋ ಆಯೋಜಿಸಲಾಗಿದ್ದು, ನಗರದ ಬನ್ನಿಮಂಟಪ‌ ಮೈದಾನದಲ್ಲಿ ಅಕ್ಟೋಬರ್ 2 ರಂದು ಬೆಳಿಗ್ಗೆ 11: 30 ಕ್ಕೆ ಏರ್ ಶೋ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ.‌ಶಂಕರ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದಲ್ಲಿ ಏರ್ ಶೋ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ಭಾರತೀಯ ವಾಯು ಪಡೆಯಿಂದ ನಡೆಯುವ ಈ ಕಾರ್ಯಕ್ರಮ ಸುಮಾರು 49 ನಿಮಿಷಗಳ ಕಾಲ ನಡೆಯುತ್ತದೆ. ಪೆಟಲ್ ರಾಪಿಂಗ್ , ಆಪರೇಷನ್ ಹಾಗೂ ಸ್ಕೈ ಡೈವಿಂಗ್ ಸಾಹಸಗಳನ್ನು ಮಾಡಲಿದ್ದು, ಇದಕ್ಕೆ ಈಗಾಗಲೇ ರಿಹರ್ಸಲ್ ಕೂಡ ಮಾಡಿಕೊಳ್ಳಲಾಗುತ್ತಿದೆ. ಇನ್ನು ಅಕ್ಟೋಬರ್ 1 ರಿಂದ ದಸರಾ ಗೋಲ್ಡ್ ಕಾರ್ಡ್‌ ವಿತರಿಸಲಾಗುವುದು. ಒಂದು ಗೋಲ್ಡ್ ಕಾರ್ಡ್‌ ಬೆಲೆ 4 ಸಾವಿರ ರೂ. ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.

ದಸರಾ ಏರ್​ ಶೋ ಹಾಗೂ ಗೋಲ್ಡ್​ ಕಾರ್ಡ್​ ಬಗ್ಗೆ ವಿವರ ನೀಡಿದ ಡಿಸಿ ಅಭಿರಾಮ್.

ಎಲ್ಲಾ ಕಾರ್ಯಕ್ರಮಗಳಲ್ಲೂ ಗೋಲ್ಡ್ ಕಾರ್ಡ್​ನೊಂದಿಗೆ ವಿಶೇಷ ವ್ಯವಸ್ಥೆಯನ್ನು ಮಾಡಲಾಗುವುದು.‌ ಇದಲ್ಲದೆ 1 ಸಾವಿರ, 500 ರೂ. ಟಿಕೆಟ್ ಜಂಬೂಸವಾರಿಗೆ ಹಾಗೂ ಪಂಜಿನ ಕವಾಯತಿನ ಸ್ಥಳ ಪ್ರವೇಶಕ್ಕೆ ಟಿಕೆಟ್ ಬೆಲೆ 250 ರೂಪಾಯಿ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ರು. ಈ ಬಾರಿ ಅರಮನೆಯ ಮುಂಭಾಗದಲ್ಲಿ ಜಂಬೂಸವಾರಿ ವೀಕ್ಷಣೆ ಮಾಡಲು 26 ಸಾವಿರ ಆಸನ ವ್ಯವಸ್ಥೆಯನ್ನು ಬನ್ನಿಮಂಟಪದ ಪಂಜಿನ ಕವಾಯತನ್ನು ವೀಕ್ಷಣೆ ಮಾಡಲು 32 ಸಾವಿರ ಆಸನ ವ್ಯವಸ್ಥೆಯನ್ನು ಮಾಡಲಾಗಿದ್ದು, ಎಲ್ಲಾ ವ್ಯವಸ್ಥೆಗಳನ್ನು ಈಗಾಗಲೇ ಮಾಡಲು ಸಿದ್ಧತೆ ಆರಂಭಿಸಿದ್ದೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ABOUT THE AUTHOR

...view details