ಮೈಸೂರು: ಜಿಲ್ಲೆಯಲ್ಲಿ ಕೊರೊನಾದಿಂದ ಗುಣಮುಖರಾದ ಮೂವರು ಡಿಸ್ಚಾರ್ಜ್ ಆದರೆ, ಸೋಂಕಿನಿಂದ ಬಳಲುತ್ತಿದ್ದ ಇಬ್ಬರು ಇಲ್ಲಿನ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದಾರೆ.
ದೆಹಲಿಯಿಂದ ನಂಜನಗೂಡಿ ತಾಲೂಕಿನ ನೀಲಕಂಠ ನಗರಕ್ಕೆ ಆಗಮಿಸಿದ ಓರ್ವನಿಗೆ ಹಾಗೂ ತಮಿಳುನಾಡಿನಿಂದ ಮೈಸೂರಿನ ಇಟ್ಟಿಗೆಗೂಡಿಗೆ ಆಗಮಿಸಿದ ಓರ್ವನಿಗೆ ಸೋಂಕು ದೃಢವಾಗಿದ್ದು, ಇಬ್ಬರಿಗೂ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೈಸೂರು ಜಿಲ್ಲೆಯಲ್ಲಿ ಮತ್ತೆ ಸೋಂಕು ಪತ್ತೆ ಇನ್ನು ಸೋಂಕು ಪತ್ತೆಯಾದ ಹಿನ್ನೆಲೆ ಇಟ್ಟಿಗೆಗೂಡು ಹಾಗೂ ನೀಲಕಂಠ ನಗರವನ್ನು ಸೀಲ್ಡೌನ್ ಮಾಡಲಾಗಿದೆ. ಒಟ್ಟಾರೆ 101 ಪ್ರಕರಣಗಳ ಪೈಕಿ 96 ಮಂದಿ ಈವರೆಗೆ ಡಿಸ್ಚಾರ್ಜ್ ಆಗಿದ್ದು, ಐದು ಸಕ್ರಿಯ ಪ್ರಕರಣಗಳಿವೆ.
ಒಟ್ಟಾರೆ 11,827 ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ಅದರಲ್ಲಿ 11,727 ಮಂದಿಗೆ ನೆಗೆಟಿವ್ ವರದಿ ಬಂದಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.