ಕರ್ನಾಟಕ

karnataka

ETV Bharat / state

ಹಳ್ಳಿಹಕ್ಕಿಗೆ ಒಳ್ಳೇ ಕಾಲ ಬರುತೈತೆ.. ಹೆಚ್‌ ವಿಶ್ವನಾಥ ಜಿಲ್ಲಾ ಉಸ್ತುವಾರಿ ಸಚಿವರಾಗ್ತಾರೆ: ವರ್ತೂರ್‌ ಪ್ರಕಾಶ್ - ಮಾಜಿ ಶಾಸಕ ವರ್ತೂರ್ ಪ್ರಕಾಶ

ವಿಶ್ವನಾಥ್​ ಅವರು 3 ವರ್ಷಗಳ ಕಾಲ ಮೈಸೂರು ಜಿಲ್ಲೆಯ ಸಮೃದ್ಧಿಗಾಗಿ ಹಾಗೂ ಹಿಂದುಳಿದ ವರ್ಗದವರ ಕೈ ಹಿಡಿಯುತ್ತಾರೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

farmer mla Vartur prakash
ಮಾಜಿ ಶಾಸಕ ವರ್ತೂರು ಪ್ರಕಾಶ್

By

Published : Feb 8, 2020, 6:51 PM IST

ಮೈಸೂರು: 4 ತಿಂಗಳಲ್ಲಿ ಎರಡು ವಿಧಾನ ಪರಿಷತ್ ಸ್ಥಾನ ಖಾಲಿಯಾಗುತ್ತದೆ. ಎಂಟಿಬಿ ಹಾಗೂ ಹೆಚ್.ವಿಶ್ವನಾಥ್ ಇಬ್ಬರೂ ವಿಧಾನ ಪರಿಷತ್ ಸದಸ್ಯರಾದ ಬಳಿಕ ​ಸಚಿವರಾಗುತ್ತಾರೆ. ಹೆಚ್‌. ವಿಶ್ವನಾಥ್ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗುವ ವಿಶ್ವಾಸವಿದೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಹೇಳಿದ್ದಾರೆ.

ಮಾಜಿ ಸಚಿವ ಹೆಚ್‌. ವಿಶ್ವನಾಥ್ ಅವರ ನಿವಾಸಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಂಟಿಬಿ ಹಾಗೂ ಹೆಚ್.ವಿಶ್ವನಾಥ್ ಸೋತಿರುವ ಕಾರಣ ಯಡಿಯೂರಪ್ಪನವರು ಸಚಿವ ಸ್ಥಾನ ಕೊಡುವ ಧೈರ್ಯ ಮಾಡಲಿಲ್ಲ. ವಿಧಾನ ಪರಿಷತ್​ನಲ್ಲಿ ಖಾಲಿಯಾಗುವ ಸ್ಥಾನ ನೀಡಲಿದ್ದಾರೆ ಎಂದರು.

ವಿಶ್ವನಾಥ್​ ಅವರು 3 ವರ್ಷಗಳ ಕಾಲ ಮೈಸೂರು ಜಿಲ್ಲೆಯ ಸಮೃದ್ಧಿಗಾಗಿ ಹಾಗೂ ಹಿಂದುಳಿದ ವರ್ಗದವರ ಕೈ ಹಿಡಿಯುತ್ತಾರೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ABOUT THE AUTHOR

...view details