ಮೈಸೂರು: ಅರಮನೆಯ ಕಲ್ಯಾಣತೊಟ್ಟಿಯಲ್ಲಿ ಯದುವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದರೆ, ತಂದೆಯ ಪೂಜಾ ವಿಧಾನವನ್ನು ಪುತ್ರ ಆದ್ಯವೀರ್ ತದೇಕಚಿತ್ತದಿಂದ ನೋಡುತ್ತಿದ್ದ ದೃಶ್ಯ ಗಮನಸೆಳೆಯಿತು.
ಯದುವೀರ್ ಆಯುಧ ಪೂಜಾ ಕೈಂಕರ್ಯವನ್ನು ತದೇಕಚಿತ್ತದಿಂದ ವೀಕ್ಷಿಸಿದ ಪುತ್ರ ಆದ್ಯವೀರ್ - Yaduveer Krishnadatta Chamaraja Wadiyar son
ಅರಮನೆಯ ಕಲ್ಯಾಣತೊಟ್ಟಿಯಲ್ಲಿ ಯದುವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪಟ್ಟದ ಆನೆ ಹಾಗೂ ಕುದುರೆಗಳಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪುತ್ರ 4 ವರ್ಷದ ಆದ್ಯವೀರ್ ಅಪ್ಪನ ಪೂಜಾ ವಿಧಾನ ಹಾಗೂ ಆಯುಧ ಪೂಜೆಯ ಸಂಭ್ರಮವನ್ನು ಸಂತಸದಿಂದ ಕಣ್ತುಂಬಿಕೊಳ್ಳುತ್ತಿದ್ದನು.
ಆದ್ಯವೀರ್
ಆಯುಧ ಪೂಜೆಯ ಹಿನ್ನೆಲೆಯಲ್ಲಿ ಅರಮನೆಯ ಕಲ್ಯಾಣತೊಟ್ಟಿಯಲ್ಲಿ ಯದುವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪಟ್ಟದ ಆನೆ ಹಾಗೂ ಕುದುರೆಗಳಿಗೆ ಪೂಜೆ ಸಲ್ಲಿಸಿದರು. ಪೂಜಾ ಕೈಂಕರ್ಯಗಳನ್ನು ಪತ್ನಿ ತ್ರಿಷಿಕಾ ಕುಮಾರಿ, ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಹಾಗೂ ರಾಜಮನೆತನದವರು ನೋಡುತ್ತಿದ್ದರು.
ಈ ಸಂದರ್ಭದಲ್ಲಿ ನಾಲ್ಕು ವರ್ಷದ ಆದ್ಯವೀರ್ ಅಪ್ಪನ ಪೂಜಾ ವಿಧಾನ ಹಾಗೂ ಆಯುಧ ಪೂಜೆಯ ಸಂಭ್ರಮವನ್ನು ನೋಡಿ ಸಂತಸದಿಂದ ಕಣ್ತುಂಬಿಕೊಳ್ಳುತ್ತಿದ್ದನು.