ಕರ್ನಾಟಕ

karnataka

ETV Bharat / state

ಫ್ರೀ  ಕಾಶ್ಮೀರ ಪ್ರಕರಣ ವಿಚಾರಣೆ ಜ.24ಕ್ಕೆ ಮುಂದೂಡಿಕೆ

ಮೈಸೂರು, ಫ್ರಿ ಕಾಶ್ಮೀರ ನಾಮಫಲಕಕ್ಕೆ ಸಂಬಂಧಿಸಿದ ಪ್ರಕರಣವನ್ನು ಮೈಸೂರಿನ 2ನೇ ಹೆಚ್ಚುವರಿ ನ್ಯಾಯಾಲಯ ಜ.24ಕ್ಕೆ ಮುಂದೂಡಿದೆ.

By

Published : Jan 20, 2020, 6:07 PM IST

adjournment-hearing-on-free-kashmir-case-
ಫ್ರಿ ಕಾಶ್ಮೀರ ಪ್ರಕರಣ ವಿಚಾರಣೆ ಜ.24ಕ್ಕೆ ಮುಂದೂಡಿಕೆ

ಮೈಸೂರು: ಫ್ರೀ ಕಾಶ್ಮೀರ ನಾಮಫಲಕಕ್ಕೆ ಸಂಬಂಧಿಸಿದ ಪ್ರಕರಣವನ್ನು ಮೈಸೂರಿನ 2ನೇ ಹೆಚ್ಚುವರಿ ನ್ಯಾಯಾಲಯ ಜ.24ಕ್ಕೆ ಮುಂದೂಡಿದೆ.

ಯುವತಿ ನಳಿನಿ ಪರವಾಗಿ ಅನಿಸ್ ಪಾಷಾ ಅವರು ವಾದ ಮಾಡಿದ್ದರು. ಆದರೆ, ಸರ್ಕಾರಿ ವಕೀಲರು ಕಾಲಾವಕಾಶ ಕೇಳಿದ್ದರಿಂದ 24ಕ್ಕೆ ವಿಚಾರಣೆ ನಡೆಸಲು ಪ್ರಕರಣವನ್ನು ಮುಂದೂಡಲಾಗಿದೆ.

ಫ್ರಿ ಕಾಶ್ಮೀರ ನಾಮಫಲಕ ಪ್ರದರ್ಶನ ಮಾಡಿದ್ದು, ದೇಶದ್ರೋಹವಾಗುವುದಿಲ್ಲ. ಹಾಗಂತ ನಾವು ವಾದ ಮಂಡನೆ ಮಾಡಿದ್ದೇವೆ. ನಳಿನಿ ಫ್ರೀ ಕಾಶ್ಮೀರ ನಾಮಫಲಕ ಮಾಡಿದ್ದ ವೇಳೆ ಸ್ಥಳದಲ್ಲಿ ಇದ್ದ ಇಬ್ಬರು ಪೊಲೀಸರು ಎಫ್​ಐಆರ್ ದಾಖಲು ಮಾಡಿದ್ದಾರೆ. ಅವರ ಮೇಲೆ ಕಾನೂನು ಕ್ರಮ ಆಗುವ ಸಾಧ್ಯತೆ ಇದೆ. ಈ ಪ್ರಕರಣಕ್ಕೆ ನಳಿನಿ ಈಗಾಗಲೇ ಸ್ಪಷ್ಪನೆ ನೀಡಿದ್ದಾರೆ. ಈಗಾಗಲೇ ಮಧ್ಯಂತರ ಜಾಮೀನು ಸಿಕ್ಕಿರುವುದರಿಂದ ಯಾವುದೇ ತೊಂದರೆ ಇಲ್ಲ. ನಾವು ನಿರೀಕ್ಷಣಾ ಜಾಮೀನು ನೀಡುವಂತೆ ವಾದ ಮಾಡುತ್ತೇವೆ ಎಂದು ನಳಿನಿ ಪರ ವಕಾಲತ್ತು ವಹಿಸಿರುವ ವಕೀಲ ಅನಿಸ್ ಪಾಷಾ ಹೇಳಿಕೆ ನೀಡಿದ್ದಾರೆ.

ABOUT THE AUTHOR

...view details