ಕರ್ನಾಟಕ

karnataka

ETV Bharat / state

ದಳಪತಿಗಳಿಗೆ ಐಟಿ ಶಾಕ್: ತಮ್ಮತ್ತ ಬೊಟ್ಟು ಮಾಡಿದ ಪುಟ್ಟರಾಜುಗೆ ಸುಮಲತಾ ಪಂಚ್​ - undefined

ಇಂದು ಮಂಡ್ಯ, ಹಾಸನ ಹಾಗೂ ಬೆಂಗಳೂರಿನ ಕೆಲವೆಡೆ ಐಟಿ ದಾಳಿ ನಡೆದಿದೆ. ಅದರಲ್ಲೂ ಜೆಡಿಎಸ್​ನ ನಾಯಕರು ಹಾಗೂ ಅವರ ಆಪ್ತರ ಮನೆ ಮೇಲೆ ಈ ದಾಳಿ ನಡೆದಿದ್ದು, ಇದು ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಕುಮ್ಮಕ್ಕು ಎಂದು ಪರೋಕ್ಷವಾಗಿ ಸುಮಲತಾ ವಿರುದ್ಧ ಸಿ.ಎಸ್​. ಪುಟ್ಟರಾಜು ಬೊಟ್ಟು ಮಾಡಿದ್ದರು.

ನಟಿ ಸುಮಲತಾ

By

Published : Mar 28, 2019, 11:29 AM IST

ಮೈಸೂರು: ತಮ್ಮ ಮನೆ ಮೇಲೆ ಐಟಿ ದಾಳಿ ನಡೆದಿರುವುದಕ್ಕೆ ತಮ್ಮತ್ತ ಬೊಟ್ಟು ಮಾಡಿರುವ ಸಚಿವ ಸಿ.ಎಸ್​ ಪುಟ್ಟರಾಜುಗೆ ಸುಮಲತಾ ಟಾಂಗ್ ಕೊಟ್ಟಿದ್ದಾರೆ. ಇವತ್ತಿನಿಂದ ಜೆಡಿಎಸ್​ನವರು ಐಟಿ ದಾಳಿ ವಿಷಯ ಇಟ್ಟುಕೊಂಡು ಅನುಕಂಪಕ್ಕಾಗಿ ರಾಜಕೀಯ ಡ್ರಾಮಾ ಶುರು ಮಾಡ್ತಾರೆ ಎಂದು ಟೀಕಿಸಿದ್ದಾರೆ.

ನಗರದಲ್ಲಿಂದು ಖಾಸಗಿ ಹೋಟೆಲ್​​ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ, ನನಗೂ ಐಟಿ ದಾಳಿಗೂ ಯಾವುದೇ ಸಂಬಂಧವಿಲ್ಲ. ನಾನು ಕೇವಲ ಪಕ್ಷೇತರ ಅಭ್ಯರ್ಥಿ ಈ ದಾಳಿಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕೇಳಲಿ ಎಂದರು.

ನಟಿ ಸುಮಲತಾ

ಇದೇ ವೇಳೆ ಪುಟ್ಟರಾಜು ಅವರಿಗೆ ನೇರವಾಗಿ ವಾಗ್ಬಾಣ ಬಿಟ್ಟ ಸುಮಲತಾ, ಅಂಬರೀಶ್ ಕುಟುಂಬದ ಬಗ್ಗೆ ಮಾತನಾಡುವಾಗ ಒಂದು ನಿಮಿಷ ಕಣ್ಣು ಮುಚ್ಚಿ ಅಂಬರೀಶ್ ಅವರನ್ನು ನೆನಪಿಸಿಕೊಳ್ಳಿ. ಅದನ್ನು ಬಿಟ್ಟು ನಾನು ಬೇರೆ ಏನನ್ನೂ ಹೇಳುವುದಿಲ್ಲ ಎಂದರು. ನನ್ನ ಪರವಾಗಿ ಪ್ರಚಾರಕ್ಕೆ ಬಂದಿರುವ ದರ್ಶನ್, ಯಶ್ ಸೈಲೆಂಟಾಗಿ ಮನೆಯಲ್ಲಿರಲಿ. ಸುಮಲತಾ ಪರ ಪ್ರಚಾರಕ್ಕೆ ಬಂದರೆ ತನಿಖೆ ಮಾಡಿಸುತ್ತೇವೆ ಎಂದು ಜೆಡಿಎಸ್ ಶಾಸಕರೊಬ್ಬರು ಬೆದರಿಕೆ ಹಾಕಿದ್ದರು. ಹೀಗೆ ಬೆದರಿಕೆ ಹಾಕುವುದು ನಮಗೆ ಬರುವುದಿಲ್ಲ. ಅದನ್ನು ಜೆಡಿಎಸ್​​ನವರು ಮಾಡುತ್ತಾರೆ ಎಂದರು.

ಇನ್ನು ನನ್ನನ್ನು ಸೋಲಿಸಲು ಹಾಗೂ ಮತದಾರರಲ್ಲಿ ಗೊಂದಲ ಸೃಷ್ಟಿಸಲು 3 ಜನ ಸುಮಲತಾ ಹೆಸರಿನವರಿಂದ ನಾಮಪತ್ರ ಸಲ್ಲಿಸಿದ್ದಾರೆ. ಹೀಗೆ ಮಾಡಿ ಅಂತಾ ನನಗೂ ನಮ್ಮ ಹಿತೈಷಿಯೊಬ್ಬರು ಹೇಳಿದ್ದರು. ಆದರೆ ನಾನು ಬೇಡ ಎಂದೆ. ಬೇಕಿದ್ದರೆ ನೇರ ರಾಜಕೀಯ ಮಾಡೋಣ. ಅವರಂತೆ ಹಿಂಬಾಗಿಲಿನ, ಕುತಂತ್ರದ ರಾಜಕಾರಣ ನಮಗೆ ಬರುವುದಿಲ್ಲ ಎಂದು ಜೆಡಿಎಸ್​ ನಾಯಕರ ವಿರುದ್ಧ ಸುಮಲತಾ ವಾಗ್ದಾಳಿ ನಡೆಸಿದರು.

For All Latest Updates

TAGGED:

ABOUT THE AUTHOR

...view details