ಮೈಸೂರು:ಕೆಲ ದಿನಗಳ ಹಿಂದೆ ಯುವ ದಸರಾ ಕಾರ್ಯಕ್ರಮದಲ್ಲಿ ಗಾಯಕ ಚಂದನ್ ಶೆಟ್ಟಿ ವೇದಿಕೆ ಮೇಲೆ ನಿವೇದಿತಾಗೆ 'ಪ್ರಪೋಸ್' ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದು, ಈ ಪ್ರಕರಣ ಮಾಸುವ ಮುನ್ನವೆ ಯುವದಸರಾ ಸಮಿತಿ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.
ಯುವದಸರಾದಲ್ಲಿ ಮತ್ತೊಂದು ಎಡವಟ್ಟು: ಭೈರದೇವಿ ಸಿನಿಮಾ ಪ್ರಚಾರಕ್ಕೆ ವೇದಿಕೆ ಬಳಿಸಿಕೊಂಡ ರಾಧಿಕಾ! - ಭೈರದೇವಿ ಸಿನಿಮಾ
ನಿನ್ನೆ ಯುವದಸರಾ ಕೊನೆಯ ದಿನದ ಅಂಗವಾಗಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ನಟಿ ರಾಧಿಕ ಕುಮಾರಸ್ವಾಮಿಯವರು 'ಭೈರದೇವಿ' ಸಿನಿಮಾದ ಆಡಿಯೋ ಪ್ರಚಾರಕ್ಕೆ ವೇದಿಕೆಯನ್ನು ಬಳಸಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ.
yuva dasara programme

ಸಿನಿಮಾಗಳ ಆಡಿಯೋ ಪ್ರಚಾರ, ವೈಯಕ್ತಿಕ ವಿಷಯಗಳಿಗೆ ಯುವದಸರಾ ಕಾರ್ಯಕ್ರಮವನ್ನು ಬಳಸಿಕೊಳ್ಳದಂತೆ ಸಮಿತಿ ಕಾರ್ಯಕ್ರಮ ಆಯೋಜಕರಿಗೆ ಸೂಚನೆ ನೀಡಬೇಕು. ಆದರೆ ಸಮಿತಿ ಇಂತಹ ವಿಷಯಗಳಲ್ಲಿ ಮೌನವಹಿಸಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗಳಿಗೆ ಒಳಗಾಗಿದೆ.