ಮೈಸೂರು: ಬ್ಯಾಂಕ್ ಖಾತೆ ದುರ್ಬಳಕೆ ಆರೋಪದಡಿ ನಟಿ ಚೈತ್ರ ಹಳ್ಳಿಕೇರಿ ಅವರು ಪತಿ ಮತ್ತು ಮಾವನ ವಿರುದ್ಧ ಇಲ್ಲಿನ ಜಯಲಕ್ಷ್ಮಿಪುರಂ ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ. ತನ್ನ ಅನುಮತಿ ಇಲ್ಲದೇ ಗೋಲ್ಡ್ ಲೋನ್ ಪಡೆದಿದ್ದಾರೆ ಎಂದು ಪತಿ ಬಾಲಾಜಿ, ಮಾವ ಪೋತರಾಜ್ ಮತ್ತು ಸೌತ್ ಇಂಡಿಯನ್ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಆರೋಪ ಮಾಡಿದ್ದು, ಇದೀಗ ವಂಚಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.
ಪತಿ, ಮಾವನಿಂದ ವಂಚನೆ, ಜೀವ ಬೆದರಿಕೆ; ಎಫ್‌ಐಆರ್ ದಾಖಲಿಸಿದ ನಟಿ ಚೈತ್ರ ಹಳ್ಳಿಕೇರಿ - ಪತಿ ವಿರುದ್ಧ ಚೈತ್ರ ಹಳ್ಳಿಕೇರಿ ದೂರು
ಪತಿ ಮತ್ತು ಮಾವನ ವಿರುದ್ಧ ವಂಚನೆ ಮತ್ತು ಜೀವ ಬೆದರಿಕೆಯಂಥ ಗಂಭೀರ ಆರೋಪ ಮಾಡಿರುವ ನಟಿ ಚೈತ್ರ ಹಳ್ಳಿಕೇರಿ ಅವರು ಮೈಸೂರಿನಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಪತಿ, ಮಾವನ ವಿರುದ್ಧ ದೂರು ದಾಖಲಿಸಿದ ನಟಿ ಚೈತ್ರ ಹಳ್ಳಿಕೇರಿ
ಗುರು ಶಿಷ್ಯ, ಶ್ರೀ ದಾನಮ್ಮ ದೇವಿ ಚಿತ್ರದಲ್ಲಿ ನಟಿಸಿರುವ ನಟಿ ಈ ಹಿಂದೆ ಕೂಡಾ ಪೋತರಾಜ್ ವಿರುದ್ದ ಬಸವನಗುಡಿ ಠಾಣೆಗೆ ದೂರು ನೀಡಿದ್ದರು. ಇದೀಗ ಮತ್ತೆ ಬ್ಯಾಂಕ್ ಖಾತೆ ದುರ್ಬಳಕೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ:ಜಮೀನಿನಲ್ಲಿ ಗಾಂಜಾ ಬೆಳೆದ ರೈತ ಸೇರಿ 2.50 ಲಕ್ಷ ಮೌಲ್ಯದ ಮಾಲು ವಶಕ್ಕೆ
Last Updated : May 24, 2022, 10:38 AM IST