ಕರ್ನಾಟಕ

karnataka

ETV Bharat / state

ಅಂಬರೀಶ್​​​ ಇದ್ದಾಗ ಅವ್ರ ಮುಂದೆ ಹೇಗೆ ಕುತ್ಕೊತಿದ್ರು ಗೊತ್ತಾ?... ಶಿವರಾಮೇಗೌಡರಿಗೆ ಯಶ್​ ಟಾಂಗ್​​​ - ಯಶ್

ಶ್ರೀರಂಗಪಟ್ಟಣದಲ್ಲಿರುವ ನಿಮಿಷಾಂಬ ದೇವಸ್ಥಾನದಲ್ಲಿ ಬಾಬುರಾಯನಕೊಪ್ಪಲು ಗ್ರಾಮದಿಂದ ಪ್ರಚಾರ ಆರಂಭಿಸಿದ ಯಶ್, ಸುಮಲತಾ ಅಂಬರೀಶ್ ವಿರುದ್ಧ ಮಾತನಾಡಿದವರಿಗೆ ಟಾಂಗ್ ಕೊಟ್ಟಿದ್ದಾರೆ. ಸುಮಲತಾ ಅಂಬರೀಶ್ ಅವರಿಗೆ ಅವಕಾಶ ಕೊಡಿ ಎಂದು ಜನರಿಗೆ ಕೇಳಿಕೊಂಡಿದ್ದಾರೆ.

ಚುನಾವಣಾ ಪ್ರಚಾರದಲ್ಲಿ ಯಶ್

By

Published : Apr 3, 2019, 3:16 PM IST

ಮೈಸೂರು:ಅಂಬರೀಶಣ್ಣ ಬದುಕಿದ್ದಾಗ ಅವರ ಮುಂದೆ ಹೇಗೆ ಕುತ್ಕೊತಿದ್ರು ಗೊತ್ತಾ? ಹೀಗೆ ಮಾತನಾಡಿ ಶಿವರಾಮೇಗೌಡರಿಗೆ ನಟ ಯಶ್ ಟಾಂಗ್ ಕೊಟ್ಟಿದ್ದಾರೆ.

ಚುನಾವಣಾ ಪ್ರಚಾರದಲ್ಲಿ ಯಶ್

ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ಶ್ರೀರಂಗಪಟ್ಟಣದಲ್ಲಿರುವ ನಿಮಿಷಾಂಬ ದೇವಸ್ಥಾನದಲ್ಲಿ ಬಾಬುರಾಯನಕೊಪ್ಪಲು ಗ್ರಾಮದಿಂದ ಪ್ರಚಾರ ಆರಂಭಿಸಿದ ಯಶ್, ಸುಮಲತಾ ಅಂಬರೀಶ್ ವಿರುದ್ಧ ಮಾತನಾಡಿದವರಿಗೆ ಟಾಂಗ್ ಕೊಟ್ಟಿದ್ದಾರೆ.

ಮಂಡ್ಯದಲ್ಲಿ ಎಲ್ಲರಿಗೂ ಅವಕಾಶ ಕೊಟ್ಟಿದ್ದಾರೆ. ಹಾಗೆಯೇ ಸುಮಲತಾ ಅಂಬರೀಶ್ ಅವರಿಗೆ ಅವಕಾಶ ಕೊಡಿ. ಅಂಬರೀಶ್ ಬದುಕಿದ್ದಾಗ ಅವರ ಮುಂದೆ ಹೇಗೆ ಕುತ್ಕೊತಿದ್ರು, ಈಗ ಹೇಗೆ ಮಾತಾಡ್ತಾರೆ. ಅವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದರು‌.

ಸುಮಲತಾ ಹೆಸರಿನಲ್ಲಿ ನಾಲ್ಕು ಮಂದಿ ನಾಮಪತ್ರ ಹಾಕಿಸಿ ಗೊಂದಲ ಉಂಟುಮಾಡಿದ್ದಾರೆ. ಹೀಗಾಗಿ ಸುಮಲತಾ‌ ಅಂಬರೀಶ್ ಅವರ ಚಿಹ್ನೆ ಹಾಗೂ ಕ್ರಮ ಸಂಖ್ಯೆ ನೋಡಿ ಮತಹಾಕಿ. ಸಂಸತ್​ನಲ್ಲಿ ಮಾತನಾಡಲು ಜ್ಞಾನ ಹಾಗೂ ಭಾಷೆ ಬೇಕು. ಅದು ಸುಮಲತಾ ಅಂಬರೀಶ್ ಅವರಿಗೆ ಇದೆ ಎಂದರು.

ABOUT THE AUTHOR

...view details