ಮೈಸೂರು: ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಪರವಾಗಿ ನಟ ಉಪೇಂದ್ರ ಮೈಸೂರಿನಲ್ಲಿ ಬಿರುಸಿನ ಪ್ರಚಾರ ಮಾಡಿ ಮತಯಾಚಿಸಿದರು.
ಪ್ರಚಾರಕ್ಕಿಳಿದ ರಿಯಲ್ ಸ್ಟಾರ್... ಬೇರೆ ರಾಜಕಾರಣಿಗಳು ಕೊಡುವ ಭರವಸೆ 'ಬರೀ ಓಳು' ಅಂದ್ರು ಉಪ್ಪಿ - ನಟ ಉಪೇಂದ್ರ
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಿ ವಿ. ಆಶಾರಾಣಿ ಸ್ಪರ್ಧಿಸುತ್ತಿದ್ದಾರೆ. ಅವರ ಪರವಾಗಿ ನಟ ಉಪೇಂದ್ರ ಮೈಸೂರು ಪ್ರಚಾರ ಮಾಡಿ ಮತಯಾಚಿಸಿದ್ದಾರೆ. ಈ ವೇಳೆ ಒಮ್ಮೆ ಅಧಿಕಾರ ಕೊಟ್ಟು ನೋಡಿ ಬದಲಾವಣೆ ಹೇಗೆ ಮಾಡುತ್ತೀವಿ ಎಂದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಉತ್ತಮ ಪ್ರಜಾಕೀಯ ಪಕ್ಷದಿಂದ ಸ್ಪರ್ಧಿಸಿರುವ ವಿ. ಆಶಾರಾಣಿ ಪರವಾಗಿ ಪ್ರಚಾರ ಮಾಡಲು ಆಗಮಿಸಿದ ಉಪೇಂದ್ರ, ದೇವರಾಜ ಮಾರುಕಟ್ಟೆಯಲ್ಲಿನ ಬೀದಿ ಬದಿ ವ್ಯಾಪಾರಿಗಳ ಬಳಿ ತೆರಳಿ ಕರಪತ್ರ ನೀಡುವ ಮೂಲಕ ತಮ್ಮ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ನಂತರ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ಸಮಯದಲ್ಲಿ ರಾಜಕಾರಣಿಗಳು ಸುಳ್ಳು ಭರವಸೆ ನೀಡುತ್ತಾರೆ, ಗೆದ್ದ ನಂತರ ನಿಮ್ಮ ಕಡೆ ತಿರುಗಿಯೂ ನೋಡುವುದಿಲ್ಲ. ಆದರೆ ನಮ್ಮ ಪಕ್ಷದ ಕಾನ್ಸೆಪ್ಟ್ ಬೇರೆ. ಒಮ್ಮೆ ಅಧಿಕಾರ ಕೊಟ್ಟು ನೋಡಿ ಬದಲಾವಣೆ ಹೇಗೆ ಮಾಡುತ್ತೀವಿ ಎಂದರು.