ಮೈಸೂರು : ನಾವು ಯಾವಾಗಲೂ ಕನ್ನಡದ ಪರ ಇದ್ದೇವೆ. ಹೋರಾಟದ ಉತ್ತಮ ರೀತಿಯಲ್ಲಿ ಆಗಬೇಕು. ಡಿ.31 ಕ್ಕೆ ಬಂದ್ಗೆ ಕರೆ ನೀಡಿರುವುದು ಬೇಸರದ ವಿಚಾರವಾಗಿದೆ ಎಂದು ನಟ ಶಿವರಾಜ್ ಕುಮಾರ್ ಹೇಳಿದರು.
ಕರ್ನಾಟಕ ಬಂದ್ಗೆ ಕರೆ ನೀಡಿರುವುದು ಬೇಸರ ತಂದಿದೆ: ಶಿವರಾಜ್ ಕುಮಾರ್ - ಕರ್ನಾಟಕ ಬಂದ್ ಕುರಿತು ಶಿವರಾಜ್ ಕುಮಾರ್ ಹೇಳಿಕೆ
ಡಿ.31 ಕ್ಕೆ 3 ಕನ್ನಡದ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಇಂತಹ ವೇಳೆಯಲ್ಲಿ ಬಂದ್ ಕರೆ ನೀಡಿರುವುದು ಕನ್ನಡಕ್ಕೆ ದ್ರೋಹ ಮಾಡಿದ ಹಾಗೇ ಎಂದು ಶಿವರಾಜ್ ಕುಮಾರ್ ಹೇಳಿಕೆ.
ನಗರದ ಜಯಲಕ್ಷ್ಮಿಪುರಂನಲ್ಲಿರುವ ಡಿಆರ್ಸಿ ಸಿನಿಮಾಸ್ ನಲ್ಲಿ 'ಬಡವ ರಾಸ್ಕಲ್' ಸಿನಿಮಾ ವೀಕ್ಷಣೆ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಂದು 3 ಕನ್ನಡದ ಸಿನಿಮಾಗಳು ಬಿಡುಗಡೆ ಆಗುತ್ತಿವೆ.ಇಂತಹ ವೇಳೆಯಲ್ಲಿ ಬಂದ್ ಕರೆ ನೀಡಿರುವುದು ಕನ್ನಡಕ್ಕೆ ದ್ರೋಹ ಮಾಡಿದ ಹಾಗೇ. ಸರ್ಕಾರ ಉತ್ತಮವಾಗಿ ಸ್ಪಂದನೆ ಮಾಡುತ್ತಿದೆ. ಇಷ್ಯೂ ಇದ್ದಾಗ ಅದನ್ನ ಬುದ್ದಿವಂತಿಕೆಯಿಂದ ಬಗೆ ಹರಿಸಬೇಕು ಎಂದರು.
ಬಡವ ರಾಸ್ಕಲ್ ಸಿನಿಮಾದಲ್ಲಿ ಧನಂಜಯ್ ಉತ್ತಮವಾಗಿ ನಟಿಸಿದ್ದಾರೆ. ನನಗೆ ಧನಂಜಯ್ ಪರ್ಪಾಮೆನ್ಸ್ ತುಂಬಾ ಇಷ್ಟ ಆಯ್ತು. ಫೋಸ್ಟ್ ಪ್ರೊಡಕ್ಷನ್ ನಲ್ಲಿ ಧನಂಜಯ್ ಅದ್ಧೂರಿಯಾಗಿ ಮಾಡಿದ್ದಾರೆ. ಒಂದು ಸಣ್ಣ ವಿಷಯವನ್ನ ವಿಭಿನ್ನವಾಗಿ, ಹಾಸ್ಯದ, ಕ್ಯೂರಿಯಾಸಿಟಿ ಮೂಲಕ ಹೇಳಲು ಹೊರಟಿದ್ದಾರೆ. ಶಂಕರ್ ಗುರು ಉತ್ತಮ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಎಲ್ಲಾ ಪಾತ್ರಗಳಿಗೂ ಜೀವ ತುಂಬಿದ್ದಾರೆ ಎಂದರು.