ಮೈಸೂರು:ಕೊರೊನಾ ಹಿನ್ನಲೆ ಚಾಮುಂಡಿ ಬೆಟ್ಟಕ್ಕೆ ಬರಲು ಸಾರ್ವಜನಿಕರಿಗೆ ನಿಷೇಧ ವಿಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರೂ ಈ ಆದೇಶವನ್ನು ನಟ ದರ್ಶನ್ ಹಾಗೂ ಜನಪ್ರತಿನಿಧಿಗಳು ಉಲ್ಲಂಘಿಸಿರುವ ಆರೋಪ ಕೇಳಿಬಂದಿದೆ.
ಚಾಮುಂಡಿ ಬೆಟ್ಟಕ್ಕೆ ನಟ ದರ್ಶನ್, ಸಚಿವ ಈಶ್ವರಪ್ಪ ಭೇಟಿ... ಡಿಸಿ ಆದೇಶ ಉಲ್ಲಂಘನೆ ಆರೋಪ! - ಆಷಾಢ ಶುಕ್ರವಾರ ಸುದ್ದಿ
ಇಂದು 3 ನೇ ಆಷಾಢ ಶುಕ್ರವಾರ ಆಗಿರುವುದರಿಂದ ಜನ ಹೆಚ್ಚಾಗಿ ದೇವಿಯ ದರ್ಶನಕ್ಕೆ ಆಗಮಿಸುವ ಹಿನ್ನೆಲೆ, ಮುಂಜಾಗ್ರತಾ ಕ್ರಮವಾಗಿ ಇಂದಿನಿಂದ 5 ದಿನಗಳ ಕಾಲ ನಿಷೇಧ ವಿಧಿಸಿ ಆದೇಶ ಹೊರಡಿಸಲಾಗಿತ್ತು. ಆದರೆ ಈ ಆದೇಶವನ್ನು ನಟ ದರ್ಶನ್, ಸಚಿವ ಈಶ್ವರಪ್ಪ ಹಾಗೂ ಸಂಸದ ಪ್ರತಾಪ್ ಸಿಂಹ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಜನಸಾಮಾನ್ಯರು ನಮಗೊಂದು ನ್ಯಾಯ, ವಿಐಪಿಗಳಿಗೆ ಒಂದು ನ್ಯಾಯವೆಂದು ಬೇಸರ ಹೊರಹಾಕಿದ್ದಾರೆ.
ಇಂದು 3 ನೇ ಆಷಾಢ ಶುಕ್ರವಾರ ಆಗಿರುವುದರಿಂದ ಜನ ಹೆಚ್ಚಾಗಿ ದೇವಿಯ ದರ್ಶನಕ್ಕೆ ಆಗಮಿಸುವ ಹಿನ್ನೆಲೆ, ಮುಂಜಾಗ್ರತಾ ಕ್ರಮವಾಗಿ ಇಂದಿನಿಂದ 5 ದಿನಗಳ ಕಾಲ ನಿಷೇಧ ವಿಧಿಸಿ ಆದೇಶ ಹೊರಡಿಸಲಾಗಿತ್ತು. ಆದರೆ ಈ ಆದೇಶವನ್ನು ನಟ ದರ್ಶನ್, ಸಚಿವ ಕೆ ಎಸ್ ಈಶ್ವರಪ್ಪ ಹಾಗೂ ಸಂಸದ ಪ್ರತಾಪ್ ಸಿಂಹ ಉಲ್ಲಂಘಿಸಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ಒಂದು ನ್ಯಾಯ ವಿಐಪಿಗಳಿಗೆ ಒಂದು ನ್ಯಾಯವೆಂದು ಸ್ಥಳೀಯರು ಬೇಸರ ಹೊರಹಾಕಿದ್ದಾರೆ.
ಬೆಟ್ಟಕ್ಕೆ ಭೇಟಿ ನೀಡುವುದಕ್ಕೆ ನಿಷೇಧವಿದ್ದರು ಕೆಲವು ಪ್ರಭಾವಿಗಳ ಕುಟುಂಬದವರು, ಯುವಕರು ಬೆಳಗ್ಗೆಯೇ ದೇವಸ್ಥಾನಕ್ಕೆ ಆಗಮಿಸಿದ್ದರು ಎನ್ನಲಾಗ್ತಿದೆ. ಈ ಕುರಿತು ಪೊಲೀಸರು ಕೂಡ ಕಂಡು ಕಾಣದಂತೆ ವರ್ತಿಸಿದ್ದಾರೆ ಎನ್ನಲಾಗ್ತಿದೆ.