ಕರ್ನಾಟಕ

karnataka

ETV Bharat / state

ನಟ ದರ್ಶನ್ ಸಾಕ್ಷ್ಯಗಳನ್ನ ನಾಶಪಡಿಸುವ ಸಾಧ್ಯತೆ ಇದೆ : ನಿರ್ದೇಶಕ ಇಂದ್ರಜಿತ್ ಲಂಕೇಶ್ - ನಟ ದರ್ಶನ್ ಸಂದೇಶ್ ಹೊಟೇಲ್ ಸಪ್ಲೈಯರ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿಕೆ

ಸೆಲೆಬ್ರಿಟಿಗಳು ಮೋಸ ಆಗಿದೆ ಅಂತಾ ಬಂದ ಕೂಡಲೇ ಎಫ್ಐಆರ್ ದಾಖಲಾಗುತ್ತೆ. ಅದೇ ಸಾಮಾನ್ಯ ವರ್ಗದ ಜನರಿಗೆ ಮೋಸವಾದ್ರೇ ನ್ಯಾಯ ಇಲ್ವಾ ಎಂದು ಪ್ರಶ್ನಿಸಿದರು. ರಸ್ತೆಯಲ್ಲಿ ಅಪಘಾತವಾದ್ರೇ ನಾವು ಆಸ್ಪತ್ರೆಗೆ ಮಾತ್ರ ಸೇರಿಸೋಕೆ ಮಾತ್ರ ಆಗೋದು, ಆಪರೇಷನ್ ಮಾಡೋಕೆ ಆಗಲ್ಲ. ಅದೇ ರೀತಿ ನಾನು ಈ ಕೇಸ್​ಗೆ ಸಂಬಂಧಿಸಿದಂತೆ ಎಲ್ಲಾ ವಿವರಣೆ ನೀಡಿದ್ದೇನೆ..

ದರ್ಶನ್ ಸಾಕ್ಷ್ಯಗಳನ್ನ ನಾಶಪಡಿಸುವ ಸಾಧ್ಯತೆ ಇದೆ
ದರ್ಶನ್ ಸಾಕ್ಷ್ಯಗಳನ್ನ ನಾಶಪಡಿಸುವ ಸಾಧ್ಯತೆ ಇದೆ

By

Published : Jul 17, 2021, 5:22 PM IST

ಮೈಸೂರು: ನಟ ದರ್ಶನ್ ಸಂದೇಶ್ ಹೋಟೆಲ್ ಸಪ್ಲೈಯರ್ ಮೇಲಿನ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ನಿನ್ನೆಯಷ್ಟೇ ಸಂದೇಶ್ ನಾಗರಾಜ್ ಮಾತನಾಡಿದ್ದಾರೆ ಎನ್ನಲಾಗಿದ್ದ ಆಡಿಯೋ ಒಂದು ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿತ್ತು. ಅಲ್ಲಿಂದ ಸಾಕಷ್ಟು ಬೆಳವಣಿಗಳ ಬಳಿಕ, ಇಂದು ನಿರ್ದೇಶಕ ಇಂದ್ರಜಿತ್ ಲಂಕೇಶ್, ಮತ್ತೆ ಪರೋಕ್ಷವಾಗಿ ಮತ್ತೆ ದರ್ಶನ್ ವಿರುದ್ಧ ಗುಡುಗಿದ್ದಾರೆ.

ದರ್ಶನ್ ಸಾಕ್ಷ್ಯಗಳನ್ನ ನಾಶಪಡಿಸುವ ಸಾಧ್ಯತೆ ಇದೆ

ಮೈಸೂರಿಗೆ ತೆರಳಿದ ಕೂಡಲೇ ದರ್ಶನ್​ ಯಾಕೆ ಹೋಟೆಲ್​​ಗೆ ಹೋದರು, ಸಾಕ್ಷ್ಯಗಳನ್ನು ನಾಶ ಪಡಿಸುವ ಎಲ್ಲಾ ಸಾಧ್ಯತೆ ಇರುತ್ತೆ ಅಲ್ವಾ?. ಪೊಲೀಸರು ಕೂಡಲೇ ಸುಮೋಟೊ ಕೇಸ್ ದಾಖಲಿಸಿಕೊಂಡು, ತನಿಖೆ ನಡೆಸುವಂತೆ ನೀವು ಸಹ ಒತ್ತಡ ಹಾಕಬೇಕು ಎಂದರು.

ಇದನ್ನೂ ಓದಿ : ದೊಡ್ಮನೆಯವರ ಆಸ್ತಿಯನ್ನು ನಟ ದರ್ಶನ್​ಗೆ ಕೊಡಲಿಲ್ಲ: ಉಮಾಪತಿ ಸ್ಪಷ್ಟನೆ

ಸೆಲೆಬ್ರಿಟಿಗಳು ಮೋಸ ಆಗಿದೆ ಅಂತಾ ಬಂದ ಕೂಡಲೇ ಎಫ್ಐಆರ್ ದಾಖಲಾಗುತ್ತೆ. ಅದೇ ಸಾಮಾನ್ಯ ವರ್ಗದ ಜನರಿಗೆ ಮೋಸವಾದ್ರೇ ನ್ಯಾಯ ಇಲ್ವಾ ಎಂದು ಪ್ರಶ್ನಿಸಿದರು. ರಸ್ತೆಯಲ್ಲಿ ಅಪಘಾತವಾದ್ರೇ ನಾವು ಆಸ್ಪತ್ರೆಗೆ ಮಾತ್ರ ಸೇರಿಸೋಕೆ ಮಾತ್ರ ಆಗೋದು, ಆಪರೇಷನ್ ಮಾಡೋಕೆ ಆಗಲ್ಲ. ಅದೇ ರೀತಿ ನಾನು ಈ ಕೇಸ್​ಗೆ ಸಂಬಂಧಿಸಿದಂತೆ ಎಲ್ಲಾ ವಿವರಣೆ ನೀಡಿದ್ದೇನೆ ಎಂದರು.

ಇದನ್ನೂ ಓದಿ : Video: ನಟ 'ದರ್ಶನ'​ಕ್ಕಾಗಿ ಫಾರಂಹೌಸ್ ಮುಂದೆ ಅಭಿಮಾನಿಯ ಡ್ಯಾನ್ಸ್..!

ABOUT THE AUTHOR

...view details