ಮೈಸೂರು:ಕೋವಿಡ್ನಂತಹ ಕಷ್ಟ ಕಾಲದಲ್ಲಿ ಮೃಗಾಲಯಕ್ಕೆ ಸಾಕಷ್ಟು ನಷ್ಟವಾಗಿದೆ. ಈ ಸಂದರ್ಭ ಚಿತ್ರ ನಟ ದರ್ಶನ್ ಅವರ ಅಭಿಮಾನಿಗಳು ಒಂದು ಕೋಟಿ ರೂಪಾಯಿ ಹಣವನ್ನು ನೀಡಿದ್ದಾರೆ. ಹೀಗಾಗಿ ಜಿಲ್ಲಾಡಳಿತದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಏಷಿಯನ್ ಪೇಂಟ್ಸ್ ಹಾಗೂ ನೆಸ್ಲೆ ಕಂಪನಿಯ ಸ್ಯಾನಿಟೈಸರ್ ಹಾಗೂ ಆಕ್ಸಿಜನ್ ಕಾನ್ಸಂಟ್ರೇಟರ್ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.
ಕೋವಿಡ್ನಂತಹ ಸಂಕಷ್ಟದ ಕಾಲದ ನಡುವೆಯೂ ಸಿಎಸ್ಆರ್ ವತಿಯಿಂದ ಜಿಲ್ಲೆಗೆ ಸಹಾಯ ಮಾಡುತ್ತಿರುವವರಿಗೆಲ್ಲರಿಗೂ ಲಾಕ್ಡೌನ್ ಮುಗಿದ ನಂತರ ಸರ್ಕಾರದಿಂದ ಅಭಿನಂದನೆ ಸಲ್ಲಿಸಲಾಗುವುದು. ಅಲ್ಲದೇ ಸಂಕಷ್ಟದ ಕಾಲದಲ್ಲಿ ಜಿಲ್ಲೆಗೆ ಹಲವಾರು ಮಂದಿ ಸಹಾಯ ಮಾಡುತ್ತಿದ್ದಾರೆ. ಸರ್ಕಾರದ ನಿಯಮದಂತೆ ಜಿಲ್ಲೆಯಲ್ಲಿ ಲಾಕ್ಡೌನ್ ವಿಸ್ತರಣೆಯಾಗಿದೆ. ಇದರ ಬಗ್ಗೆ ಮೊದಲೇ 11 ವಿಧಾನಸಭಾ ಕ್ಷೇತ್ರಗಳ ಶಾಸಕರು ಹಾಗೂ ಸಂಸದರ ಜತೆ ಚರ್ಚಿಸಿದ ನಂತರವೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ನಂತರ ನಗರದ ಬನ್ನಿ ಮಂಟಪದ ಯಲ್ಲಮ್ಮ ಕಾಲೋನಿಯಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಆಹಾರದ ಕಿಟ್ಗಳನ್ನು ವಿತರಿಸಿದರು. ಬಳಿಕ ಅರಗು ಮತ್ತು ಬಣ್ಣದ ಕಾರ್ಖಾನೆಗೆ ತೆರಳಿ ಕಾರ್ಮಿಕರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಓದಿ:ಒಂದು ಕೋಟಿ ದಾಟಿದ ದೇಣಿಗೆ ಮೊತ್ತ: ನಟ ದರ್ಶನ್ಗೆ ಮೃಗಾಲಯ ಪ್ರಾಧಿಕಾರ ಧನ್ಯವಾದ