ಕರ್ನಾಟಕ

karnataka

ETV Bharat / state

ಚಾಮುಂಡಿ ಬೆಟ್ಟದಲ್ಲಿ ಧ್ರುವ ಸರ್ಜಾಗೆ ಆ್ಯಕ್ಷನ್, ಕಟ್ ಹೇಳಿದ ಪ್ರೇಮ್ - Acter Druva sarja New movie shooting started in mysore

ಡಾ. ರಾಜ್‌ಕುಮಾರ್ ಹುಟ್ಟುಹಬದ ಹಿನ್ನೆಲೆಯಲ್ಲಿ ಇವತ್ತೇ ಸಿನಿಮಾ ಮುಹೂರ್ತ ಮಾಡಬೇಕು ಎಂಬುದು ಮೊದಲೇ ನಿರ್ಧಾರ ಆಗಿತ್ತು ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ.

ನಿರ್ದೇಶಕ ಪ್ರೇಮ್ ಹಾಗೂ ನಟ ಧ್ರುವ ಸರ್ಜಾ ಮಾತನಾಡಿದರು
ನಿರ್ದೇಶಕ ಪ್ರೇಮ್ ಹಾಗೂ ನಟ ಧ್ರುವ ಸರ್ಜಾ ಮಾತನಾಡಿದರು

By

Published : Apr 24, 2022, 8:33 PM IST

ಮೈಸೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ನಿರ್ದೇಶಕ ಪ್ರೇಮ್ ಕಾಂಬಿನೇಷನ್‌ನಲ್ಲಿ ಚಾಮುಂಡಿ ಬೆಟ್ಟದಲ್ಲಿ ಹೊಸ ಸಿನಿಮಾ ಮುಹೂರ್ತ ನೆರವೇರಿಸಲಾಗಿದೆ. ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಚಿತ್ರತಂಡ ನಂತರ ದೇವಸ್ಥಾನದ ಮುಂಭಾಗ ಕ್ಲ್ಯಾಪಿಂಗ್ ಮಾಡಿ ಮರದ ತೇರಿನಲ್ಲಿ ಚಾಮುಂಡೇಶ್ವರಿ ಮೂರ್ತಿ ಕೂರಿಸಿ ಮೆರವಣಿಗೆ ಮಾಡಿದೆ. ನಟ ಧ್ರುವ ಸರ್ಜಾ ತೇರು ಎಳೆದರು.


ನಂತರ ಸಿನಿಮಾ ಕುರಿತು ನಟ ಧ್ರುವಸರ್ಜಾ ಮಾತನಾಡಿ, ಜೂನ್​ನಿಂದ ಚಿತ್ರೀಕರಣ ಆರಂಭ ಆಗುತ್ತೆ. ಪ್ರೇಮ್ ಸರ್ ಆಕ್ಷನ್ ಜೊತೆಗೆ ಫ್ಯಾಮಿಲಿ ವಿಚಾರ ಬ್ಲೆಂಡ್ ಮಾಡಿರುತ್ತಾರೆ. ಚಿತ್ರದ ಟೈಟಲ್, ಹೀರೋಯಿನ್, ಎಲ್ಲದರ ಬಗ್ಗೆ ನಾನೇನೂ ಹೇಳಲ್ಲ, ಏನೂ ಹೇಳಬೇಡಿ ಎಂದಿದ್ದಾರೆ. ಎಲ್ಲವನ್ನೂ ನಿರ್ದೇಶಕರ ಬಳಿ ಕೇಳಿ ಎಂದು ಹೇಳಿದರು.

ನಿರ್ದೇಶಕ ಪ್ರೇಮ್ ಮಾತನಾಡಿ, ಬೆಂಗಳೂರು ಅಂಡರ್ ವರ್ಲ್ಡ್ ಕತೆ ಹೇಳಲು ಹೊರಟಿದ್ದೇವೆ. ಚಿತ್ರದ ಹೆಸರು ಮುಂದಿನ ತಿಂಗಳು ಲಾಂಚ್ ಆಗುತ್ತೆ ಎಂದರು.

ಇದನ್ನೂ ಓದಿ:ಶಾಸಕ ಬೆಲ್ಲದ ಮನೆಗೆ ಸಿಎಂ ಬೊಮ್ಮಾಯಿ: ಕುತೂಹಲ ಕೆರಳಿಸಿದ ಭೇಟಿ

For All Latest Updates

TAGGED:

ABOUT THE AUTHOR

...view details