ಕರ್ನಾಟಕ

karnataka

ETV Bharat / state

ನಿಂದನೆಯಿಂದ ಕೋಪಗೊಂಡು ವ್ಯಕ್ತಿಯ ಮೇಲೆ ಆ್ಯಸಿಡ್ ದಾಳಿ - ಬಿಳಿಕೆರೆ

ವೈಯಕ್ತಿಕವಾಗಿ ನಿಂದಿಸಿದ್ದಾನೆ ಎಂದು ಕೋಪಗೊಂಡು ವ್ಯಕ್ತಿಯೊಬ್ಬನ ಮೇಲೆ ಆ್ಯಸಿಡ್​ ದಾಳಿ ನಡೆಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಆಸಿಡ್ ದಾಳಿ
ಆಸಿಡ್ ದಾಳಿ

By

Published : May 29, 2020, 6:56 PM IST

ಮೈಸೂರು:ವೈಯಕ್ತಿಕವಾಗಿ ನಿಂದಿಸಿದ್ಧಕ್ಕೆ ಕೋಪಗೊಂಡು ವ್ಯಕ್ತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ ನಡೆದಿದೆ.

ಬಿಳಿಕೆರೆ ಗ್ರಾಮದ ಕಾಳಪ್ಪ ನಾಯಕ ಎಂಬುವವರ ಮೇಲೆ ಅದೇ ಗ್ರಾಮದ ಚಂದ್ರಶೇಖರ ಚಾರಿ ಎಂಬುವವರು ಆ್ಯಸಿಡ್ ದಾಳಿ ಮಾಡಿದ್ದಾನೆ. ಚಂದ್ರಶೇಖರಚಾರಿಯನ್ನು ಕಾಳಪ್ಪ ನಾಯಕ ವೈಯಕ್ತಿಕವಾಗಿ ನಿಂದಿಸಿದ್ದಾನೆ ಎಂದು ಕೋಪಗೊಂಡು ಈ ದಾಳಿ ನಡೆಸಿದ್ದಾನೆ. ಪರಿಣಾಮ ಕಾಳಪ್ಪ ನಾಯಕನ ಕಿವಿಯ ಕೆಳಭಾಗ ಹಾಗೂ ಬೆನ್ನಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸದ್ಯ ಚಂದ್ರಶೇಖರಚಾರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಸಂಬಂಧ ಬಿಳಿಕೆರೆ ಪೊಲೀಸ್​​​​​​ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details