ಕರ್ನಾಟಕ

karnataka

ETV Bharat / state

ತಾಯಂದಿರ ಪಾಲಿಗೆ ಸಂಜೀವಿನಿಯಾದ ಸರ್ಕಾರಿ ಚೆಲುವಾಂಬ ಹೆರಿಗೆ ಆಸ್ಪತ್ರೆ - Mysore latest news

'ಸಾಮಾನ್ಯ ದಿನಗಳಲ್ಲಿ ತಿಂಗಳಿಗೆ 800 ಹೆರಿಗೆಗಳು ಆಗುತ್ತವೆ. ಆದರೆ, ಈ ಸಂದರ್ಭದಲ್ಲಿ ನಮ್ಮಲ್ಲಿ 900ಕ್ಕೂ ಹೆಚ್ಚು ಹೆರಿಗೆಗಳಾಗಿವೆ. ಲಾಕ್​ಡೌನ್​ ಸಂದರ್ಭದಲ್ಲಿ ನಮ್ಮ ಕೆಲಸವೂ ಸಹ ಚಾಲೆಂಜಿಂಗ್​ ಆಗಿತ್ತು'

Achievement of Cheluvamba maternity hospital staff
ತಾಯಂದಿರ ಪಾಲಿಗೆ ಸಂಜೀವಿನಿಯಾದ ಸರ್ಕಾರಿ ಚೆಲುವಾಂಬ ಹೆರಿಗೆ ಆಸ್ಪತ್ರೆ

By

Published : Sep 28, 2020, 6:39 PM IST

Updated : Sep 28, 2020, 7:09 PM IST

ಮೈಸೂರು:ಕೋವಿಡ್​ ಸಂದರ್ಭದಲ್ಲಿ ಅಚ್ಚುಕಟ್ಟಾದ ಚಿಕಿತ್ಸೆ ಹಾಗೂ ಆರೈಕೆ ನೀಡುತ್ತ ಬಂದಿರುವ ಇಲ್ಲಿನ ಸರ್ಕಾರಿ ಚೆಲುವಾಂಬ ಹೆರಿಗೆ ಆಸ್ಪತ್ರೆಯು ಸಾವಿರಾರು ತಾಯಂದಿರ ಪಾಲಿನ ಸಂಜೀವಿನಿಯಾಗಿ ಹೊರ ಹೊಮ್ಮಿದೆ.

ತಾಯಂದಿರ ಪಾಲಿಗೆ ಸಂಜೀವಿನಿಯಾದ ಸರ್ಕಾರಿ ಚೆಲುವಾಂಬ ಹೆರಿಗೆ ಆಸ್ಪತ್ರೆ

100 ವರ್ಷ ತುಂಬಿದ ಹಳೆಯದಾದ ಈ ಆಸ್ಪತ್ರೆ ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಮಡಿಕೇರಿ ಜನರಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ಸಂಜೀವಿನಿಯಾಗಿದೆ. ಇದೇ ಕಾರಣಕ್ಕೆ ಈ ಸರ್ಕಾರಿ ಆಸ್ಪತ್ರೆಯನ್ನು ಹೆರಿಗೆ ಆಸ್ಪತ್ರೆ ಎಂದೂ ಕರೆಯುತ್ತಾರೆ. ಇನ್ನು ಮಹಾಮಾರಿ ಕೊರೊನಾ ಸಂದರ್ಭದಲ್ಲಿ ತಾಯಂದಿರಿಗಾಗಿ ಆಸ್ಪತ್ರೆ ತೆಗೆದುಕೊಂಡ ವಿಶೇಷ ಮುತುವರ್ಜಿ ನಿಜವಾಗಿಯೂ ಇಲ್ಲಿನ ಜನರ ಪಾಲಿಗೆ ಮರು ಜನ್ಮ ಅನ್ನಿಸಿದೆ.

ತಾಯಂದಿರ ಪಾಲಿಗೆ ಸಂಜೀವಿನಿಯಾದ ಸರ್ಕಾರಿ ಚೆಲುವಾಂಬ ಹೆರಿಗೆ ಆಸ್ಪತ್ರೆ

ಕೋವಿಡ್​ನ ಆರಂಭದ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳು ಗರ್ಭಿಣಿಯನ್ನು ಸೇರಿಕೊಳ್ಳಲು ಹಿಂದು - ಮುಂದು ನೋಡುತ್ತಿದ್ದವು. ಅಂತಹ ಸಮಯದಲ್ಲಿ ಇಲ್ಲಿ ಕಳೆದ ಮಾರ್ಚ್​ನಿಂದ ಇಲ್ಲಿಯವರೆಗೆ ಪ್ರತಿ ತಿಂಗಳು 800 ರಿಂದ 900 ಗರ್ಭಿಣಿಯರ ಯಶಸ್ವಿ ಹೆರಿಗೆ ಮಾಡಿಸಲಾಗಿದೆ. ಅಷ್ಟೇ ಅಲ್ಲದೇ ಅವರಿಗಾಗಿಯೇ ಪಕ್ಕದಲ್ಲೇ ಪ್ರತ್ಯೇಕ ಕಟ್ಟಡ ತೆರೆದು 128 ಮಂದಿ ಪಾಸಿಟಿವ್ ತಾಯಂದಿರಿಗೆ ಹೆರಿಗೆ ಮಾಡಿಸಿದ ಕೀರ್ತಿ ಈ ಚೆಲುವಾಂಬ ಆಸ್ಪತ್ರೆಯ ಡಾಕ್ಟರ್​ಗೆ ಸಲ್ಲುತ್ತದೆ.

ತಾಯಂದಿರ ಪಾಲಿಗೆ ಸಂಜೀವಿನಿಯಾದ ಸರ್ಕಾರಿ ಚೆಲುವಾಂಬ ಹೆರಿಗೆ ಆಸ್ಪತ್ರೆ

ಲಾಕ್​ಡೌನ್​ ವೇಳೆ, ಖಾಸಗಿ ಆಸ್ಪತ್ರೆಗಳು ಹೆರಿಗೆಗಾಗಿ ಯಾರನ್ನು ದಾಖಲು ಮಾಡಿಕೊಳ್ಳುತ್ತಿರಲಿಲ್ಲ, ಇಂತಹ ಸಂದರ್ಭದಲ್ಲಿ ಎಲ್ಲ ಸಿಬ್ಬಂದಿ, ಡಾಕ್ಟರ್​​ಗಳನ್ನು ಆಸ್ಪತ್ರೆಯಲ್ಲೇ ಇರಿಸಿಕೊಂಡು ವಿಶೇಷ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು 4 ತಿಂಗಳ ಕಾಲ ಪಾಸಿಟಿವ್ ತಾಯಂದಿರಿಗೂ ಹೆರಿಗೆ ಮಾಡಿಸಿದ್ದೇವೆ. ಸಾಮಾನ್ಯ ದಿನಗಳಲ್ಲಿ ತಿಂಗಳಿಗೆ 800 ಹೆರಿಗೆಗಳು ಆಗುತ್ತವೆ. ಆದರೆ, ಈ ಸಂದರ್ಭದಲ್ಲಿ ನಮ್ಮಲ್ಲಿ 900ಕ್ಕೂ ಹೆಚ್ಚು ಹೆರಿಗೆಗಾಳಾಗಿವೆ. ಲಾಕ್​ಡೌನ್​ ಸಂದರ್ಭದಲ್ಲಿ ನಮ್ಮ ಕೆಲಸವೂ ಸಹ ಚಾಲೆಂಜಿಂಗ್​ ಆಗಿತ್ತು ಎನ್ನುತ್ತಾರೆ ಚೆಲುವಾಂಬ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಪ್ರಮೀಳಾ.

ತಾಯಂದಿರ ಪಾಲಿಗೆ ಸಂಜೀವಿನಿಯಾದ ಸರ್ಕಾರಿ ಚೆಲುವಾಂಬ ಹೆರಿಗೆ ಆಸ್ಪತ್ರೆ
Last Updated : Sep 28, 2020, 7:09 PM IST

ABOUT THE AUTHOR

...view details