ಮೈಸೂರು :ಚಿನ್ನಾಭರಣ ದೋಚಿ ಅಂಗಡಿ ಮಾಲೀಕನಿಗೆ ಹಲ್ಲೆ ನಡೆಸಿದ ವಿಡಿಯೋವೊಂದು 'ಈಟಿವಿ ಭಾರತ್'ಗೆ ಲಭ್ಯವಾಗಿದೆ.
ವಿದ್ಯಾರಣ್ಯಪುರಂನ ಪ್ರಮುಖ ರಸ್ತೆಯಲ್ಲಿರುವ ಅಮೃತ ಗೋಲ್ಡ್ ಆ್ಯಂಡ್ ಸಿಲ್ವರ್ ಚಿನ್ನಾಭರಣ ಅಂಗಡಿಗೆ ಬಂದ ನಾಲ್ವರು ದರೋಡೆಕೋರರು ಎಂಟ್ರಿ ಕೊಡ್ತಾರೆ. ಮಾಲೀಕ ಧರ್ಮೇಂದ್ರ ಎಂಬುವರನ್ನು ಮೂವರು ಸೇರಿ ಥಳಿಸಿದರೆ, ಮತ್ತೊಬ್ಬ ಚಿನ್ನಾಭರಣ ತುಂಬಿಕೊಂಡು ಪರಾರಿಯಾಗುವ ದೃಶ್ಯ ಅಂಗಡಿಯಲ್ಲಿರುವ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.