ಮೈಸೂರು:ಡೇಟಿಂಗ್ಗೆ ಹುಡುಗಿಯರು ಸಿಗುತ್ತಾರೆ ಅಂತ ಡೇಟಿಂಗ್ ಆ್ಯಪ್ ಮೂಲಕ ಜಾಹೀರಾತು ನೀಡಿ ವಂಚಿಸುತ್ತಿದ್ದ ಆರೋಪಿಯನ್ನು ನಗರದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಲೋಕ್ಯಾಂಟೋ ಆ್ಯಪ್ನಲ್ಲಿ ಯುವತಿಯರ ಫೋಟೋಗಳನ್ನು ಹಾಕುತ್ತಿದ್ದನಂತೆ.
'ಸಿಂಗಲ್ ಕಾಲೇಜು ಹುಡುಗಿಯರು ಸಿಗುತ್ತಾರೆ. ನಗ್ನ ವಿಡಿಯೋ ಕಾಲ್ ಸರ್ವಿಸ್ ಇದೆ. ಹುಡುಗಿಯರೇ ನೇರವಾಗಿ ನಿಮ್ಮನ್ನು ಭೇಟಿ ಮಾಡುತ್ತಾರೆ' ಎಂದೆಲ್ಲಾ ಸುಳ್ಳು ಜಾಹೀರಾತು ಹಾಕುತ್ತಿದ್ದ. ಹೀಗೆ ಸುಮಾರು 80 ರಿಂದ 100 ಜನರ ಬಳಿ 8 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚಿಸಿದ್ದ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕೂಡಲೇ ಕಾರ್ಯಪ್ರವೃತ್ತರಾದ ಸೈಬರ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.