ಕರ್ನಾಟಕ

karnataka

ETV Bharat / state

ಆಕಸ್ಮಿಕ ಬೆಂಕಿ ತಗುಲಿ ಸಿಲಿಂಡರ್,ಫ್ರಿಡ್ಜ್ ಸ್ಫೋಟ: ಮೂವರ ಸ್ಥಿತಿ ಗಂಭೀರ - accidental fire

ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಮನೆಯಲ್ಲಿದ ಸಿಲಿಂಡರ್ ಹಾಗೂ ಫ್ರಿಡ್ಜ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಮೂವರು ತೀವ್ರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

mysore
ಆಕಸ್ಮಿಕ ಬೆಂಕಿ ತಗುಲಿ ಸಿಲಿಂಡರ್,ಫ್ರಿಡ್ಜ್ ಸ್ಫೋಟ: ಮೂವರು ಗಂಭೀರ

By

Published : Feb 3, 2021, 12:34 PM IST

ಮೈಸೂರು: ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಮನೆಯಲ್ಲಿದ ಸಿಲಿಂಡರ್ ಹಾಗೂ ಫ್ರಿಡ್ಜ್ ಸ್ಫೋಟಗೊಂಡು ಮೂವರು ತೀವ್ರ ಗಾಯಗೊಂಡಿರುವ ಘಟನೆ ಹುಣಸೂರು ಪಟ್ಟಣದ ಲಾಲ್ ಬಂದ್ ಬೀದಿಯಲ್ಲಿ ನಡೆದಿದೆ.

ಆಕಸ್ಮಿಕ ಬೆಂಕಿ ತಗುಲಿ ಸಿಲಿಂಡರ್,ಫ್ರಿಡ್ಜ್ ಸ್ಫೋಟ: ಮೂವರು ಗಂಭೀರ

ಅನಿವಾಸಿ ಆಟೋ ಚಾಲಕ ಚಂದ್ರು ಅವರಿಗೆ ಸೇರಿದ ಮನೆಯಲ್ಲಿ ಬೆಂಕಿ ಅವಘಡದಿಂದ ಲಕ್ಷಾಂತರ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿದೆ. ಅನಾಹುತ ತಪ್ಪಿಸಲು ತೆರಳಿದ ನೆರೆ ಮನೆ ನಿವಾಸಿ ಮೊಹಮ್ಮದ್ ಉರ್, ಮತ್ತಿಬ್ಬರು ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಗ್ನಿ ಶಾಮಕ ಸಿಬ್ಬಂದಿ ಸೂಕ್ತ ಸಮಯಕ್ಕೆ ಬಂದು ಭಾರಿ ಅನಾಹುತ ತಪ್ಪಿಸಿದ್ದಾರೆ. ಈ ಸಂಬಂಧ ಹುಣಸೂರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details