ಮೈಸೂರು:ವೈನ್ಸ್ ಎದುರು ರಸ್ತೆ ಅಪಘಾತದಲ್ಲಿ ವ್ಯಕ್ತಿಯೋರ್ವ ಮೃತಪಟ್ಟ ಹಿನ್ನೆಲೆ ಬಾರ್ ಮುಂದೆಯೇ ಶವ ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ವೈನ್ಸ್ ಎದುರು ಅಪಘಾತ: ಶವ ಮುಂದಿಟ್ಟು ಪ್ರತಿಭಟಿಸಿದ ಗ್ರಾಮಸ್ಥರು! - Accident in front of Mysore bar
ರಾತ್ರಿ ವೈನ್ಸ್ಗೆ ತೆರಳಿ ಹಿಂದಿರುಗುವ ವೇಳೆ ಮೈಸೂರಿನಿಂದ ಮಹದೇವಪುರ ಮಾರ್ಗವಾಗಿ ತೆರಳುತ್ತಿದ್ದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮಹದೇವು ಎಂಬಾತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.
ಮಹದೇವಪುರ ಮುಖ್ಯ ರಸ್ತೆಯ ರಮ್ಮನಹಳ್ಳಿ, ಕಾಳಿಸಿದ್ದನಹುಂಡಿ ಗ್ರಾಮಗಳಿಗೆ ಹೊಂದಿಕೊಂಡಂತಿರುವ ಉಗ್ರನರಸಿಂಹ ವೈನ್ಸ್ ಶಾಪ್ ಮುಂಭಾಗ ರಮ್ಮನಹಳ್ಳಿ ಗ್ರಾಮದ ನಿವಾಸಿ ಮಹದೇವು ಎಂಬಾತ ಗುರುವಾರ ರಾತ್ರಿ ಬಾರ್‌ಗೆ ತೆರಳಿ ಹಿಂದಿರುಗುವ ವೇಳೆ ಮೈಸೂರಿನಿಂದ ಮಹದೇವಪುರ ಮಾರ್ಗವಾಗಿ ತೆರಳುತ್ತಿದ್ದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.
ಈ ಹಿನ್ನೆಲೆಯಲ್ಲಿ ವೈನ್ಸ್ನಿಂದಲೇ ಈ ಅವಘಡ ಸಂಭವಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ವೈನ್ಸ್ ಎದುರು ಮಹದೇವು ಶವವಿಟ್ಟು ಪ್ರತಿಭಟನೆ ನಡೆಸಿ ಕೂಡಲೇ ವೈನ್ಸ್ ಮುಚ್ಚುವಂತೆ ಆಗ್ರಹಿಸಿದರು.