ಮೈಸೂರು:ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಪ್ರಯಾಣಿಕರು ಎಸಿ ಬಸ್ಗಳನ್ನು ಏರಲು ಹಿಂಜರಿಯುತ್ತಿದ್ದಾರೆ. ಹೀಗಾಗಿ, ಎಸಿ ಬಸ್ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಎಸಿ ಬಸ್ ಹತ್ತದ ಪ್ರಯಾಣಿಕರು: ಡಿಪೋಗೆ ಮರಳುತ್ತಿವೆ ಬಸ್ಗಳು - ಎಸಿ ಬಸ್ ಸಂಚಾರ ರದ್ದು
ಎಸಿ ಬಸ್ಗಳಲ್ಲಿ ಪ್ರಯಾಣಿಸಲು ಜನ ಹಿಂಜರಿಯುತ್ತಿರುವ ಕಾರಣ, ಬಸ್ ನಿಲ್ದಾಣಕ್ಕೆ ಬಂದ ಬಸ್ಗಳು ವಾಪಸ್ ಡಿಪೋಗೆ ತೆರಳುತ್ತಿವೆ.
![ಎಸಿ ಬಸ್ ಹತ್ತದ ಪ್ರಯಾಣಿಕರು: ಡಿಪೋಗೆ ಮರಳುತ್ತಿವೆ ಬಸ್ಗಳು AC bus running cancellation](https://etvbharatimages.akamaized.net/etvbharat/prod-images/768-512-7778349-392-7778349-1593173215292.jpg)
ಎಸಿ ಬಸ್ ಹತ್ತದ ಪ್ರಯಾಣಿಕರು
ಕೆಎಸ್ಆರ್ಟಿಸಿಯಿಂದ ಎಸಿ ಬಸ್ಗಳನ್ನು ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಿಂದ ಪ್ರತಿದಿನ ಬೆಂಗಳೂರು ಸೇರಿದಂತೆ ಎಲ್ಲಾ ಕಡೆ ಎಸಿ ಬಸ್ಗಳ ಸಂಚರಿಸಲು ನಿರ್ಧಾರ ಕೈಗೊಳ್ಳಲಾಗಿತ್ತು.
ಪ್ರಯಾಣಿಕರಿಂದ ಬೇಡಿಕೆ ಬಂದರೆ ಮಾತ್ರ ಬಸ್ಗಳನ್ನು ಓಡಿಸುತ್ತೇವೆ. ಇಲ್ಲ ಅಂದರೆ ಓಡಿಸುವುದಿಲ್ಲ ಎಂದು ಮೈಸೂರು ಗ್ರಾಮಾಂತರ ವಿಭಾಗಿಯ ನಿಯಂತ್ರಣ ಅಧಿಕಾರಿ ಆರ್.ಅಶೋಕ್ ಅವರು ದೂರವಾಣಿ ಮೂಲಕ ಈಟಿವಿ ಭಾರತ್ಗೆ ತಿಳಿಸಿದ್ದಾರೆ.