ಕರ್ನಾಟಕ

karnataka

ETV Bharat / state

ಅಭಿಮನ್ಯು ತಂಡಕ್ಕೆ ಇಂದಿನಿಂದ ತಾಲೀಮು ಆರಂಭ

ಅರಮನೆಗೆ ಎಂಟ್ರಿ ಕೊಟ್ಟ ಅಭಿಮನ್ಯು ನೇತೃತ್ವದ ಗಜಪಡೆಗೆ ಅರಮನೆ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿದಿಂದ ವಿಶೇಷ ಪೂಜೆ ನೆರವೇರಿತು. ಈ ವೇಳೆ‌ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಶಾಸಕರಾದ ರಾಮದಾಸ್, ನಾಗೇಂದ್ರ ಸೇರಿ ಅಧಿಕಾರಿ ವರ್ಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Abhimanyu team starts rehearsal from today
ಅಭಿಮನ್ಯು ತಂಡಕ್ಕೆ ಇಂದಿನಿಂದ ತಾಲೀಮು ಆರಂಭ

By

Published : Sep 17, 2021, 6:45 AM IST

ಮೈಸೂರು:ಇಂದಿನಿಂದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ದಸರಾ ಮೆರವಣಿಗೆ ತಾಲೀಮು ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ಅಶ್ವತ್ಥಾಮ ಆನೆ ದಸರಾ ಉತ್ಸವದಲ್ಲಿ ಭಾಗಿಯಾಗುತ್ತಿದ್ದು, ನಿನ್ನೆ ನಗರಕ್ಕೆ ಆಗಮಿಸಿದ್ದ ವೇಳೆ ಬೆದರಿದಂತೆ ಕಂಡು ಬರುತ್ತಿತ್ತು.

ನಾಡಹಬ್ಬ ದಸರಾ ಈ ಬಾರಿ ಸರಳವಾದರೂ, ಸಾಂಪ್ರದಾಯಿಕವಾಗಿ ನಡೆಸಲಾಗುತ್ತಿದೆ. ದಸರೆಯ 2ನೇ ಭಾಗವಾದ ಗಜಪಡೆಯ ಸ್ವಾಗತ ಕಾರ್ಯಕ್ರಮ ಅರಮನೆ ಅಂಗಳದಲ್ಲಿ ಯಶಸ್ವಿಯಾಗಿ ನೆರವೇರಿದೆ. ಇದಕ್ಕೂ ಮುನ್ನ ಮೈಸೂರಿನ ಅಶೋಕಪುರಂನ ಅರಣ್ಯ ಭವನದಲ್ಲಿ ಅಭಿಮನ್ಯು ನೇತೃತ್ವದ ಗಜಪಡೆಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಗಿತ್ತು. ಬಳಿಕ ಕಾಲ್ನಡಿಗೆಯಲ್ಲೇ ಅಶೋಕಪುರಂನಿಂದ ಪ್ರಮುಖ ರಸ್ತೆಯ ಮೂಲಕ ಗಜಪಡೆಯನ್ನ ಅರಮನೆಗೆ ಕರೆತರಲಾಯಿತು.

ದಸರಾ ಕುರಿತು ಎಸ್​ ಟಿ ಸೋಮಶೇಖರ್ ಮಾಹಿತಿ

ಅರಮನೆಗೆ ಎಂಟ್ರಿ ಕೊಟ್ಟ ಅಭಿಮನ್ಯು ನೇತೃತ್ವದ ಗಜಪಡೆಗೆ ಅರಮನೆ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿದಿಂದ ವಿಶೇಷ ಪೂಜೆ ನೆರವೇರಿತು. ಈ ವೇಳೆ‌, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಶಾಸಕರಾದ ರಾಮದಾಸ್, ನಾಗೇಂದ್ರ ಸೇರಿ ಅಧಿಕಾರಿ ವರ್ಗ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ಇದೇ ವೇಳೆ, ಗಜಪಡೆಗೆ ಗಾಡ್ ಆಫ್ ಆನರ್ ಗೌರವ ನೀಡಿ ಪುಷ್ಪಾರ್ಚನೆ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಸಚಿವ ಸೋಮಶೇಖರ್​​, ದಸರಾ ಉದ್ಘಾಟಕರು ಯಾರೆಂಬುದು ಇನ್ನೂ ತೀರ್ಮಾನವಾಗಿಲ್ಲ. ಅಧಿವೇಶನ ಮುಗಿದ ಮೇಲೆ ಈ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ಮಾಡಲಿದ್ದು, ಸದ್ಯಕ್ಕೆ ಯಾವ ಪಟ್ಟಿ ಅಥವಾ ಶಾರ್ಟ್ ಲಿಸ್ಟ್ ತಯಾರು ಮಾಡಿಲ್ಲ ಎಂದರು.

ಇದನ್ನೂ ಓದಿ:ಈ ಬಾರಿ ನವರಾತ್ರಿ ಅಷ್ಟರಾತ್ರಿಗೆ ಸೀಮಿತ: ಶಶಿಶೇಖರ್ ದೀಕ್ಷಿತ್

ABOUT THE AUTHOR

...view details