ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾಗೆ ಸಿದ್ಧತೆ ಆರಂಭವಾಗಿವೆ. ಅರಣ್ಯ ಇಲಾಖೆ ದಸರಾಗೆ ಐದು ಆನೆಗಳ ಆಯ್ಕೆ ಅಂತಿಮಗೊಳಿಸಿದೆ. 'ಆಪರೇಷ್‌ನ್ ಹೀರೋ' ಅಭಿಮನ್ಯು, ಈ ಬಾರಿ ಜಂಬೂ ಸವಾರಿಯ ನೇತೃತ್ವವಹಿಸುವುದರೊಂದಿಗೆ ಅಂಬಾರಿ ಹೊರಲಿದ್ದಾನೆ. ಕಾಡಾನೆ, ಹುಲಿಗಳ ಆರ್ಭಟಕ್ಕೆ ಅಂಕುಶ ಹಾಕುತ್ತಿದ್ದ ಸರದಾರನಿಗೆ ನಾಡ ಅಧಿದೇವತೆ ಇರುವ ಚಿನ್ನದ ಅಂಬಾರಿ ಹೊರುವ ಅದೃಷ್ಟ ಒಲಿದಿದೆ.
'ಆಪರೇಷ್‌ನ್ ಹೀರೋ' ಅಭಿಮನ್ಯುವಿಗೆ ಒಲಿದ ಅದೃಷ್ಟ ಅಭಿಮನ್ಯು ಸೌಮ್ಯ ಸ್ವಭಾವ ಹೊಂದಿದ್ದರೂ ಕೆಲಸದಲ್ಲಿ ಬಲಶಾಲಿ. ಅಭಿಮನ್ಯುನನ್ನು ನೋಡಿದರೆ ಕಾಡಾನೆ, ಹುಲಿಗಳೇ ಭಯಬೀಳುತ್ತವೆ. 110ಕ್ಕೂ ಹೆಚ್ಚು ಪುಂಡಾನೆ, 40ಕ್ಕೂ ಹೆಚ್ಚು ಹುಲಿಗಳನ್ನ ಸೆರೆಹಿಡಿದಿರುವ ಅಭಿಮನ್ಯು ಆನೆ ಈ ಬಾರಿಯ ಗಜಪಡೆಯ ಕ್ಯಾಪ್ಟನ್ ಆಗಿದೆ.
'ಆಪರೇಷ್‌ನ್ ಹೀರೋ' ಅಭಿಮನ್ಯುವಿಗೆ ಒಲಿದ ಅದೃಷ್ಟ 'ಆಪರೇಷ್‌ನ್ ಹೀರೋ' ಅಭಿಮನ್ಯುವಿನ ಶಿಸ್ತು, ಗಾಂಭೀರ್ಯತೆ ಕಂಡು ಚಿನ್ನದ ಅಂಬಾರಿ ಹೊರುವ ಅದೃಷ್ಟವನ್ನು ಈತನಿಗೆ ನೀಡಲಾಗಿದೆ. ಇದೀಗ ಕ್ಯಾಂಪ್ನಿಂದಲೇ ಸರಳ ದಸರಾಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಅ. 2ರಂದು ತನ್ನ ಪಡೆಯೊಂದಿಗೆ ಅರಮನೆಯಂಗಳಕ್ಕೆ ಎಂಟ್ರಿ ಕೊಡಲಿದ್ದಾನೆ. ಈ ಸಾರಿ ಅಭಿಮನ್ಯುವಿಗೆ ಅಂಬಾರಿ ಹೊರುವ ಅದೃಷ್ಟ ಒಲಿದು ಬಂದಿದ್ದರಿಂದ ಜನರಲ್ಲಿಯೂ ಕುತೂಹಲವಿದೆ.
'ಆಪರೇಷ್‌ನ್ ಹೀರೋ' ಅಭಿಮನ್ಯುವಿಗೆ ಒಲಿದ ಅದೃಷ್ಟ ಹುಣಸೂರಿನಲ್ಲಿರುವ ಮತ್ತಿಗೋಡು ಶಿಬಿರದಲ್ಲಿರುವ ಗಜಪಡೆ ಕ್ಯಾಪ್ಟನ್ ಅಭಿಮನ್ಯುಗೆ ಮಾವುತ ವಸಂತ ಸಖತ್ ಟ್ರೈನಿಂಗ್ ಕೊಟ್ಟಿದ್ದಾನೆ. 54 ವರ್ಷದ ಅಭಿಮನ್ಯುಗೆ ಮುಂದಿನ ಆರು ವರ್ಷಗಳ ಕಾಲ ಅಂಬಾರಿ ಅವಕಾಶವಿದೆ. ಈ ಬಾರಿಯ ಸರಳ ದಸರಾದಲ್ಲಿ ವಿಕ್ರಮ, ಗೋಪಿ, ವಿಜಯ ಮತ್ತು ಕಾವೇರಿ ಆನೆಗಳು ಅಭಿಮನ್ಯುಗೆ ಸಾಥ್ ನೀಡಲಿವೆ ಎನ್ನುತ್ತಾರೆ ಅರಣ್ಯ ಇಲಾಖೆ ಸಿಬ್ಬಂದಿ.