ಕರ್ನಾಟಕ

karnataka

ETV Bharat / state

ಈ ಬಾರಿಯೂ ಅಭಿಮನ್ಯುವೇ ಚಿನ್ನದ ಅಂಬಾರಿ ಹೊರಲಿದ್ದಾನೆ : ಸಚಿವ ಈಶ್ವರ್ ಖಂಡ್ರೆ - ETV Bharath Kannada news

ಕಳೆದ ಬಾರಿ ಯಶಸ್ವಿಯಾಗಿ ಚಿನ್ನದ ಅಂಬಾರಿಯನ್ನು ಮೈಸೂರಿನ ರಾಜ ಬೀದಿಯಲ್ಲಿ ಹೊತ್ತು ತಿರುಗಿದ್ದ ಅಭಿಮನ್ಯುವೇ ಈ ಬಾರಿಯೂ ಅಂಬಾರಿ ಹೊರಲಿದೆ ಎಂದು ಅರಣ್ಯ ಸಚಿವರು ತಿಳಿಸಿದ್ದಾರೆ.

Abhimanyu is going to carry the golden ambari at mysore dasara
ಸಚಿವ ಈಶ್ವರ್ ಖಂಡ್ರೆ

By ETV Bharat Karnataka Team

Published : Sep 1, 2023, 2:26 PM IST

ಈ ಬಾರಿಯೂ ಚಿನ್ನದ ಅಂಬಾರಿಯನ್ನು ಅಭಿಮನ್ಯುವೇ ಹೊರಲಿದ್ದಾನೆ - ಸಚಿವ ಈಶ್ವರ್ ಖಂಡ್ರೆ

ಮೈಸೂರು:ಗಜಪಯಣದ ಮೂಲಕ 9 ಆನೆಗಳನ್ನು ಇಂದು ಮೈಸೂರಿಗೆ ಕರೆತರಲಾಗುವುದು. ಅದರಲ್ಲಿ ಕಳೆದ ಬಾರಿ ಚಿನ್ನದ ಅಂಬಾರಿಯನ್ನು ಹೊತ್ತ ಅಭಿಮನ್ಯು ಆನೆಯೇ, ಈ ಬಾರಿಯೂ ಸಹ ಚಿನ್ನದ ಅಂಬಾರಿಯನ್ನು ಹೊರುತ್ತಾನೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಗಜಪಯಣಕ್ಕೆ ಪುಷ್ಪಾರ್ಚನೆ ಮಾಡಿದ ನಂತರ ಮಾಧ್ಯಮಗಳಿಗೆ ಖಚಿತ ಪಡಿಸಿದರು.

ಗಜಪಯಣಕ್ಕೆ ಪುಷ್ಪಾರ್ಚನೆ ಮಾಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಗಜ ಪಯಣಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲು ಆಗಮಿಸಿದ್ದೇನೆ. ಬಹಳ ಸಂತೋಷವಾಗುತ್ತಿದೆ. ಇದು ದಸರಾ ಮಹೋತ್ಸವದ ಆರಂಭ ಎಂದು ಹೇಳಬಹುದು. ಒಟ್ಟು 9 ಆನೆಗಳು ಗಜಪಯಣದಲ್ಲಿ ಹೊರಡುತ್ತಿವೆ. ಅದರಲ್ಲಿ ಎಂಟು ಆನೆಗಳು ಹಿಂದಿನ ದಸರಾದಲ್ಲಿ ಪಾಲ್ಗೊಂಡಿದ್ದವು. ಒಂದು ಆನೆ ಮಾತ್ರ ಬದಲಾಗಿದೆ. ಯಾಕೆಂದರೆ ಒಂದು ಆನೆಗೆ ಮದ ಬಂದ ಕಾರಣ ಬದಲಾವಣೆ ಆಗಿದ್ದು, ಅದರ ಜೊತೆಗೆ ಇನ್ನೂ 5 ಆನೆಗಳು 15 ದಿನಗಳ ನಂತರ ಅರಮನೆಗೆ ಬರಲಿವೆ ಎಂದು ಸಚಿವರು ತಿಳಿಸಿದರು.

ಅಭಿಮನ್ಯು ಮೇಲೆ ಅಂಬಾರಿ: ಗಜಪಯಣದ ಮೂಲಕ ಹೋಗುವ ಆನೆಗಳು ಮೈಸೂರಿನ ಅರಣ್ಯ ಭವನದಲ್ಲಿ ತಂಗಲಿದ್ದು. ನಾಲ್ಕು ದಿನ ಅಲ್ಲಿ ವಾಸ್ತವ್ಯ ಹೂಡಿದ ನಂತರ ಅರಮನೆಗೆ ಹೋಗುತ್ತವೆ. ಒಂದೂವರೆ ತಿಂಗಳವರೆಗೆ ಆನೆಗಳಿಗೆ ತಾಲೀಮು ನಡೆಯುತ್ತದೆ. ಕಳೆದ ಬಾರಿ ಅಂಬಾರಿ ಹೊತ್ತಿದ್ದ ಆನೆಯಾದ ಅಭಿಮನ್ಯು, ಈ ಬಾರಿಯೂ ಸಹ ಅಂಬಾರಿ ಹೊರಲಿದೆ. ಗಜ ಪಯಣದ ತಂಡದಲ್ಲಿ ಅಭಿಮನ್ಯು ಸಹ ಇದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ನಿಶಾನೆ ಆನೆ ಆಯ್ಕೆ ಆಗಿಲ್ಲ: ನಿಶಾನೆ ಆನೆಯ ಆಯ್ಕೆ ಇನ್ನೂ ಆಗಿಲ್ಲ. ತಾಲೀಮು ನಡೆದ ನಂತರ ಆಯ್ಕೆ ಮಾಡಲಾಗುವುದು. ದಸರಾವನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ದರಾಮಯ್ಯ ಮತ್ತು ಎಚ್ ಸಿ.ಮಹಾದೇವಪ್ಪ ಅವರ ನೇತೃತ್ವದಲ್ಲಿ ಎಲ್ಲವೂ ಸರಾಗವಾಗಿ ನಡೆಯುತ್ತಿದೆ. ದೇವಿಯ ಆಶಿರ್ವಾದ ಎಲ್ಲರ ಮೇಲೆ ಇರಲಿ. ಚಾಮುಂಡೇಶ್ವರಿ ತಾಯಿಯ ಆಶಿರ್ವಾದದಿಂದ ನಾಡಿನಲ್ಲಿ ಒಳ್ಳೆಯ ಮಳೆ, ಬೆಳೆ ಆಗಲಿ. ಈ ರಾಜ್ಯದ ಜನ ಶಾಂತಿ ಸಮೃದ್ಧಿಯಿಂದ ಇರಲಿ ಎಂದು ನಾನು ಚಾಮುಂಡಿ ತಾಯಿಯಲ್ಲಿ ಕೇಳಿಕೊಳ್ಳುತ್ತೇನೆ. ನಮ್ಮ ಪಶುವೈದ್ಯರು ಆನೆಗಳ ಆರೋಗ್ಯವನ್ನು ತಪಾಸಣೆ ಮಾಡಿದ್ದಾರೆ. ಎಲ್ಲ ಆನೆಗಳು ಆರೋಗ್ಯವಾಗಿವೆ. ಮಾವುತರು, ಕಾವಾಡಿಗರು ಆರೋಗ್ಯವಾಗಿದ್ದಾರೆ ಎಂದರು.

ಅರವಳಿಕೆ ತಜ್ಞರ ಸಾವು ದುರದೃಷ್ಟಕರ : ನಿನ್ನೆ ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ ಮೃತ ಪಟ್ಟ ಅರವಳಿಕೆ ತಜ್ಞ ವೆಂಕಟೇಶ್ ಸತ್ತಿದ್ದು ದುರದೃಷ್ಟಕರ, ಅವರ ಅರವಳಿಕೆ ನೀಡುವುದರಲ್ಲಿ ತುಂಬಾ ಪ್ರವೀಣರಾಗಿದ್ದರು. ಅವರನ್ನು ಕಳೆದುಕೊಂಡಿದ್ದು ಅರಣ್ಯ ಇಲಾಖೆಗೆ ದೊಡ್ಡ ನಷ್ಟ. ಅವರ ಕುಟುಂಬಕ್ಕೆ ನೆರವು ನೀಡುವ ಕೆಲಸ ಮಾಡುತ್ತೇವೆ. ಅವರ ದುಃಖದಲ್ಲಿ ನಾವು ಪಾಲುದಾರರಾಗುತ್ತೇವೆ. ಈ ಘಟನೆ ಬಗ್ಗೆ ಸಮಗ್ರ ವರದಿ ನೀಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಈ ಸಂದರ್ಭದಲ್ಲಿ ತಿಳಿಸಿದರು.

ಇದನ್ನೂ ಓದಿ:ಮೈಸೂರು ದಸರಾ - 2023: ತುಲಾ ಲಗ್ನದಲ್ಲಿ ಪುಷ್ಪಾರ್ಚನೆ ಮಾಡುವ ಮೂಲಕ ಗಜಪಯಣಕ್ಕೆ ಚಾಲನೆ

ABOUT THE AUTHOR

...view details