ಕರ್ನಾಟಕ

karnataka

ETV Bharat / state

ದಸರಾಕ್ಕೆ ಸಿದ್ಧತೆ: ತಾಲೀಮು ಆರಂಭಿಸಿದ ಅಭಿಮನ್ಯು ನೇತೃತ್ವದ ಗಜಪಡೆ

ವಿಶ್ವ ವಿಖ್ಯಾತ ಮೈಸೂರು ದಸರಾ-2021ಕ್ಕೆ ಸಿದ್ಧತೆಗಳು ಆರಂಭವಾಗಿವೆ. ಅರಮನೆ ಪ್ರವೇಶಿಸಿದ ಅಭಿಮನ್ಯು ನೇತೃತ್ವದ ಗಜಪಡೆ ತಾಲೀಮು ಆರಂಭಿಸಿದೆ.

Abhimanyu
ತಾಲೀಮು ಆರಂಭಿಸಿದ ಗಜಪಡೆ

By

Published : Sep 19, 2021, 12:06 PM IST

ಮೈಸೂರು: ನಾಡಹಬ್ಬ ದಸರಾದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಅಭಿಮನ್ಯು ನೇತೃತ್ವದ ಗಜಪಡೆಯ ತಾಲೀಮು ಆರಂಭವಾಗಿದೆ.

ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಅಭಿಮನ್ಯು ನೇತೃತ್ವದ ಗಜಪಡೆಯನ್ನು ಕಳೆದ 16 ರಂದು ಸಾಂಪ್ರದಾಯಿಕ ಪೂರ್ಣಕುಂಭ ಸ್ವಾಗತದೊಂದಿಗೆ ಜಯಮಾರ್ತಾಂಡ ಗೇಟ್ ಮೂಲಕ ಅರಮನೆಗೆ ಬರಮಾಡಿಕೊಳ್ಳಲಾಯಿತು. ಎರಡು ದಿನಗಳ ಕಾಲ ಅರಮನೆಯಲ್ಲಿ ವಿಶ್ರಾಂತಿ ಪಡೆದ ಆನೆಗಳ ತಂಡ ಕೋವಿಡ್ ಹಿನ್ನೆಲೆಯಲ್ಲಿ ಅರಮನೆಯೊಳಗೆ ತಾಲೀಮು ಆರಂಭಿಸಿವೆ. ಗಜಪಡೆಗೆ ತಾಲೀಮಿನ ಹಿನ್ನೆಲೆ ವಿಶೇಷ ಪೌಷ್ಟಿಕ ಆಹಾರವನ್ನು ಪ್ರತಿ ದಿನ ನೀಡಲಾಗುತ್ತಿದ್ದು, ಜೊತೆಗೆ ಮಜ್ಜನವನ್ನು ಸಹ ಮಾಡಿಸಲಾಗುತ್ತಿದೆ.

ತಾಲೀಮು ಆರಂಭಿಸಿದ ಗಜಪಡೆ

ಗಜಪಡೆಗೆ ಸಿಸಿಟಿವಿ ಕಣ್ಗಾವಲು:

ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಗಜಪಡೆಗೆ ಅರಮನೆ ಮುಂಭಾಗದ ಕೋಡಿ ಸೋಮೇಶ್ವರ ದೇವಾಲಯದ ಸಮೀಪ ವಾಸ್ತವ್ಯಕ್ಕೆ ಶೆಡ್ ನಿರ್ಮಿಸಲಾಗಿದ್ದು, ಆನೆಗಳು ಇರುವ ಜಾಗದಲ್ಲಿ 8 ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಜೊತೆಗೆ ಆನೆಗಳು ಇರುವ ಜಾಗಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧ ಮಾಡಲಾಗಿದ್ದು, ಅರಣ್ಯಭವನದಲ್ಲೇ ಕುಳಿತು ಆನೆಗಳ ಚಲನವಲನವನ್ನು ಅರಣ್ಯಾಧಿಕಾರಿಗಳು ವೀಕ್ಷಿಸುತ್ತಿದ್ದಾರೆ.

ಮಾವುತರಿಗೆ ಲಸಿಕೆ:

ಗಜಪಡೆ ಜೊತೆ‌ ಆಗಮಿಸಿರುವ ಮಾವುತ ಮತ್ತು ಕಾವಾಡಿಗಳ 50 ಜನ ಸದಸ್ಯರಲ್ಲಿ 35 ಮಂದಿಗೆ ಕೋವಿಡ್ ಮೊದಲ ಹಾಗೂ ಎರಡನೇ ಡೋಸ್‌ ಹಾಕಲಾಗಿದ್ದು, ಪ್ರತಿಯೊಬ್ಬರು ಮಾಸ್ಕ್ ಮತ್ತು ಗ್ಲೌಸ್ ಕಡ್ಡಾಯವಾಗಿ ಧರಿಸಬೇಕು, ಸ್ಯಾನಿಟೈಸರ್ ಬಳಸಬೇಕು ಎಂದು ತಿಳಿಸಲಾಗಿದೆ ಅಂತಾ ಡಿಸಿಎಫ್ ಕರಿಕಾಳನ್ ತಿಳಿಸಿದ್ದಾರೆ.

ABOUT THE AUTHOR

...view details